BlogCulturalEconomyEducationEntertainmentFashionGovernmentHighlightsHuman storiesLifestyleLocal newsNational NewsOthersSportsState newsSuccess storiesTop StoriesTrending

ಕುಂದಾಪುರ: ರಾಷ್ಟ್ರೀಯ ಪವರ್‌ಲಿಫ್ಟಿಂಗ್‌ನಲ್ಲಿ ಡಾ. ಸತೀಶ್ ಖಾರ್ವಿಗೆ 4 ಚಿನ್ನ, 3 ಬೆಳ್ಳಿ 1 ಕಂಚು

Aware others:

ಕುಂದಾಪುರ: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜುಲೈ 18ರಿಂದ 23ರ ವೆರೆಗೆ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಪುರುಷ ಹಾಗೂ ಮಹಿಳೆಯರ ಕ್ಲಾಸಿಕ್ ಮತ್ತು ಇಕ್ವಿಪ್ಡ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರದ ನ್ಯೂ ಹರ್ಕ್ಯುಲಸ್ ಜಿಮ್‌ನ ವ್ಯವಸ್ಥಾಪಕರಾದ ಡಾ. ಸತೀಶ್ ಖಾರ್ವಿ ಅವರು ಅಪೂರ್ವ ಸಾಧನೆ ಮಾಡಿದ್ದಾರೆ.

ಎಂ–2 ವಿಭಾಗದ ಕ್ಲಾಸಿಕ್ ಹಾಗೂ ಇಕ್ವಿಪ್ಡ್ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧಿಸಿದ ಅವರು ಒಟ್ಟು 4 ಚಿನ್ನದ ಪದಕ, 3 ಬೆಳ್ಳಿ ಪದಕ ಹಾಗೂ 1 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದರೊಂದಿಗೆ, ಎರಡು ವಿಭಾಗಗಳಲ್ಲಿ ಒಟ್ಟು 6 ರಾಷ್ಟ್ರೀಯ ಡೆಡ್ಲಿಫ್ಟ್ ನೂತನ ದಾಖಲೆಗಳನ್ನು ನಿರ್ಮಿಸಿ ದೇಶದ ಮಟ್ಟದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.

ಡಾ. ಸತೀಶ್ ಖಾರ್ವಿ ಅವರ ಈ ಸಾಧನೆಯು ಕುಂದಾಪುರ, ಉಡುಪಿ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದು, ಕ್ರೀಡಾಭಿಮಾನಿಗಳು, ಶಿಷ್ಯರು, ಸ್ನೇಹಿತರು ಹಾಗೂ ಸಾರ್ವಜನಿಕರು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!