HighlightsBlogOthersReligionSuccess stories

ಕೃಷ್ಣಾನಂದ ಛಾತ್ರರಿಗೆ ಕುಂದೇಶ್ವರ ದೇವಳ ವತಿಯಿಂದ ಸನ್ಮಾನ

Aware others:

ಕುಂದಾಪುರ: ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಾನಂದ ಛಾತ್ರರನ್ನು ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಕೃಷ್ಣಾನಂದ ಛಾತ್ರ ಕರಾವಳಿಯ ಪ್ರಮುಖ ಸಾರಿಗೆ ಸಂವಹನ ಉದ್ಯಮಿಗಳಾಗಿ, ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತ ಅಧ್ಯಕ್ಷರಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಕುಂದೇಶ್ವರ ದೇವಸ್ಥಾನದ ಹಿರಿಮೆ ಹೆಚ್ಚಿಸಿದ್ದಾರೆ.

ಈ ಸಂದರ್ಭ ಸಮಿತಿಯ ಮೂರು ವರುಷದ ಅವಧಿಯಲ್ಲಿ ಸಹಕಾರ ನೀಡಿದ ಭಕ್ತಾಭಿಮಾನಿಗಳಿಗೆ, ದಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದರು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ,ಜಯಾನಂದ ಖಾರ್ವಿ, ವಿಶ್ವನಾಥ್ ಗರಡಿ ಮನೆ, ಸವಿತ ಜಗದೀಶ್, ವೀಣಾ ಪ್ರಕಾಶ್, ಸತೀಶ್, ನಾಗರಾಜ್ ರಾಯಪ್ಪನ ಮಠ, ದೇವಸ್ಥಾನದ ಗುರುರಾಜ್ ಹತ್ವಾರ್, ರಮೇಶ್ ಮೈಪಾಡಿ, ರಾಧಾಕೃಷ್ಣ, ದೀಕ್ಷಿತಾ ಸಾರಂಗ್, ನಿವೇದಿತಾ, ರಾಮ ರಾವ್ ಕನ್ನಂತ ಮೊದಲಾದವರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!