ಕೋಟ: ಕೃಷಿ ಭೂಮಿ ಹಡಿಲು ಬಿಡಬೇಡಿ – ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 54ನೇ ಸರಣಿ ಕಾರ್ಯಕ್ರಮದಲ್ಲಿ ಜಯರಾಮ ಶೆಟ್ಟಿ
ಕುಂದಾಪುರ: ಕೃಷಿ ಭೂಮಿ ಬಂಜೆಯಲ್ಲ ಅದನ್ನು ಹಡಿಲು ಬೀಳಲು ಬಿಡಬೇಡಿ. ಮುಂದಿನ ದಿನಗಳಲ್ಲಿ ಕೃಷಿ ಇದ್ದವರಲ್ಲಿ ಶ್ರೀಮಂತಿಕೆ ಉಳಿಯಲಿದೆ. ಕೃಷಿ ಭೂಮಿಯನ್ನು ಹಡಿಲು ಬೀಳಿಸಿದರೆ ಮುಂದೆ ಬಾರಿ ಸಂಕಷ್ಟವನ್ನು ಎದುರಿಸಬೇಕಾದಿತು. ಕೃಷಿ ಭೂಮಿ ಯಾವತ್ತು ಬಂಜೆಯಾಗಲು ಸಾಧ್ಯವಿಲ್ಲ. ಸಮಗ್ರ ಕೃಷಿ ನೀತಿ ಅನುಸರಿಸಿದರೆ ಕೃಷಿಯಲ್ಲಿ ಯಶಸ್ಸು ಸಾಧ್ಯ ಎಂದು ಕೋಟ ರೈತಧ್ವನಿ ಸಂಘಟನೆಯ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ರೈತ ಸಮುದಾಯಕ್ಕೆ ಕರೆ ನೀಡಿದರು.

ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಂಯುಕ್ತಗಳು ಸಹಯೋಗದೊಂದಿಗೆ 54ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವೇಳೆ ಅವರು ಯುವ ಕೃಷಿಕ ಮಣೂರು ಬಾಳೆಬೆಟ್ಟು ಚಂದ್ರಕಾಂತ್ ಮಧ್ಯಸ್ಥ ಇವರಿಗೆ ಕೃಷಿ ಪರಿಕರವನ್ನಿತ್ತು ಪಂಚವರ್ಣ ರೈತ ಪುರಸ್ಕಾರ ನೀಡಿ ಗೌರವಿಸಿದರು. ಮಣೂರು ಮಹಾಲಿಂಗೇಶ್ವರ ಸಭಾಂಗಣದ ಮುಖ್ಯಸ್ಥ ರಾಜೇಂದ್ರ ಉರಾಳ ಸನ್ಮಾನಿತರ ಪರವಾಗಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಪರಿಸರಸ್ನೇಹಿ ಪಾರಿಜಾತ ಗಿಡ ನೆಟ್ಟು ಗೋ ಪೂಜೆ ನೆರವೇರಿಸಲಾಯಿತು.
ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟಿಸಿದರು. ಪಂಚವರ್ಣ ಸಂಘಟನೆಯ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಸಭಾಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್ ಮಧ್ಯಸ್ಥ ಅಭಿನಂದನಾ ಭಾಷಣ ಮಾಡಿದರು. ಸ್ನೇಹಕೂಟದ ನಿರ್ದೇಶಕ ವಿಷ್ಣುಮೂರ್ತಿ ಮಯ್ಯ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸ್ನೇಹಕೂಟದ ಅಧ್ಯಕ್ಷೆ ಭಾರತಿ ವಿ ಮಯ್ಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಸ್ನೇಹಕೂಟದ ವಿನಯ ಉಡುಪ ಸನ್ಮಾನ ಪತ್ರ ವಾಚಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ ವಂದಿಸಿದರು. ರವೀಂದ್ರ ಕೋಟ ಸಂಯೋಜಿಸಿದರು.
