BlogEconomyEducationElectionEntertainmentFashionGovernmentHighlightsHuman storiesLifestyleLocal newsNational NewsOthersPoliticsState newsSuccess storiesTop StoriesTrending

ಕುಂದಾಪುರ: ಸಿಜೆಪಿ ಡಿಜಿಟಲ್ ಟ್ರೆಂಡ್ ಗೆ ದೇಶದ ವ್ಯವಸ್ಥೆ, ಸರ್ಕಾರದ ವೈಫಲ್ಯಗಳ ಬಗ್ಗೆ ಯುವಜನರಿಗಿರುವ ಅಸಮಾಧಾನವೇ ಕಾರಣ – ಕೆ. ಜಯಪ್ರಕಾಶ್ ಹೆಗ್ಡೆ

Aware others:

ಕುಂದಾಪುರ: ಬದಲಾವಣೆ ಬೇಕೆಂದಾಗ ಜನ ತಮ್ಮಷ್ಟಕ್ಕೆ ತಾವೇ ಆಂದೋಲನದ ಮೂಲಕ ಬದಲಾವಣೆ ಬಯಸುತ್ತಾರೆ. ಇಂತಹಾ ಬದಲಾವಣೆಗಳು ನಮ್ಮ ದೇಶದಲ್ಲಿ ಹಲವು ಬಾರಿ ನಡೆದಿವೆ. ಅಂತಹುದೇ ಬದಲಾವಣೆಯ ಕೂಗಿ ಕಾಕ್ರೋಚ್ ಜನತಾ ಪಾರ್ಟಿ ಮೂಲಕ ಈಗ ದೇಶದಲ್ಲಿ ನಡೆಯುತ್ತಿದೆ ಎಂದು ಮಾಜೀ ಸಂಸದ, ಮಾಜೀ ಸಜಿವ ಹಿರಿಯ ರಾಜಕೀಯ ಮುತ್ಸದ್ಧಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ನಿರುದ್ಯೋಗಿ ಯುವಕರನ್ನು ಜಿರಲೆಗಳು ಎನ್ನುವ ಹೇಳಿಕೆ ಆಧಾರದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹುಟ್ಟಿಕೊಂಡಿದೆ. ಜೊತೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೆ ದೇಶದ ಯುವ ನಿರುದ್ಯೋಗಿ ಜನತೆಯ ಮನಸ್ಸಿಗೆ ನೋವಾಗಿರುವುದೇ ಕಾರಣ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅಲ್ಲದೇ ದೇಶದ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಅದು ಕೆಲಸ‌ಮಾಡುತ್ತಿರುವುದೇ ಅದರ ಯಶಸ್ಸಿಗೆ ಕಾರಣ. ವಿರೋಧ ಮಾಡುವುದಕ್ಕಾಗಿ ಯಾವುದೇ ವಿರೋಧಗಳು ನಡೆಯಬಾರದು. ವಿಚಾರ ವಿಮರ್ಷೆಯ ಮೂಲಕ ಚರ್ಚೆಯಾಗಬೇಕಿದೆ ಎಂದು ಜಯಪ್ರಕಾಶ್ ಹೆಗ್ಡೆ ಹೆಡಳಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!