BlogEconomyEducationElectionEntertainmentFashionGovernmentHighlightsHuman storiesLifestyleLocal newsNational NewsOthersPoliticsProtestState newsTop StoriesTrending

ಕುಂದಾಪುರ: ಎನ್.ಎಸ್.ಯು.ಐ ಪ್ರತಿಭಟನೆಗೆ ಬಿಜೆಪಿ ಟ್ರೋಲ್ – ತಿರುಗೇಟು ನೀಡಿದ ಕೆ. ಜಯಪ್ರಕಾಶ್ ಹೆಗ್ಡೆ

Aware others:

ಕುಂದಾಪುರ: ಯಾವುದೇ ಟೀಕೆಗಳು ವೈಚಾರಿಕ ಹಿನ್ನೆಲೆಯಲ್ಲಿರಬೇಕು. ಪ್ರತಿಭಟನೆ ಎನ್ನುವುದು ಸಾಂವಿಧಾನಿಕ ಹಕ್ಕು. ಪ್ರತಿಭಟನೆಗೆ ಸಂಖ್ಯೆ ಮುಖ್ಯವಲ್ಲ. ಪ್ರತಿಭಟನೆಗೆ ಎತ್ತಿಕೊಂಡ ವಿಚಾರಗಳ ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕು ಎಂದು ಮಾಜೀ ಸಂಸದ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಅವರು ಕುಂದಾಪುರದಲ್ಲಿ ಎನ್.ಎಸ್.ಯು.ಐ ಸದಸ್ಯರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ನಡೆಸಲಾದ ಪ್ರತಿಭಟನೆಯನ್ನು ಟ್ರೋಲ್ ಮಾಡಿದ ಬಿಜೆಪಿ ಬೆಂಬಲಿತ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ನೀಟ್ ಪರೀಕ್ಷೆಯನ್ನು ನಂಬಿಕೊಂಡಿದ್ದು ಲಕ್ಷಾಂತರ ಯುವ ಅಭ್ಯರ್ಥಿಗಳು ಅತಂತ್ರರಾಗಿದ್ದಾರೆ. ಟ್ರೋಲ್ ಮಾಡಿದವರ ಮನೆ ಮಕ್ಕಳೂ ಈ ಸಮಸ್ಯೆಯಿಂದ ಬಳಲಿದ್ದಾರೆ. ಯುದ್ಧ ಬೇಡ ಶಾಂತಿ ಬೇಕು ಎನ್ನುವ ಸಂದೇಶದೊಂದಿಗೆ ರಾಮಾಂಜಿ ಒಬ್ಬರೇ ಪ್ರತಿಭಟನೆ ನಡೆಸಿದ್ದಾರೆ. ಅವರಿಗೂ ನಾನು ಬೆಂಬಲ ಸೂಚಿಸಿದ್ದೇನೆ. ಹಾಗಾಗಿ ಪ್ರತಿಭಟನೆಯಲ್ಲಿ ಸಂಖ್ಯೆ ಮುಖ್ಯವಲ್ಲ ಬದಲಾಗಿ ವಿಚಾರ ಮುಖ್ಯ. ಟ್ರೋಲ್ ಮಾಡುವವರು ಇದನ್ನು ಗಮನದಲ್ಲಿಟ್ಟಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!