ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಟೀಮ್ ಆನಂದ-ಸೃಷ್ಠಿ ತಂಡದಿಂದ ಸ್ವಚ್ಛತಾ ಅಭಿಯಾನ



ಕುಂದಾಪುರ: ಟೀಮ್ ಆನಂದ-ಸೃಷ್ಟಿಯ 103ನೇ ವಾರದ ಭಾಗವಾಗಿ ಕುಂದಾಪುರ ರೈಲ್ವೆ ನಿಲ್ದಾಣದ ಸುತ್ತಮುತ್ತ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು. ಕಂದಾವರ ಗ್ರಾಮ ಪಂಚಾಯತ್, ಕ್ಲೀನ್ ಕುಂದಾಪುರ ತಂಡ, ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ವೇದಿಕೆ ಕುಂದಾಪುರ, ಕಂದಾವರ ಗ್ರಾಮ ಪಂಚಾಯತ್, ಮತ್ತು ಸ್ಥಳೀಯರು ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು, ಸ್ವಯಂಸೇವಕರು ಅಭಿಯಾನದಲ್ಲಿ ಭಾಗವಹಿಸಿದ್ದರು.



ರೈಲ್ವೆ ನಿಲ್ದಾಣದ ಸುತ್ತಮುತ್ತ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು ಹಾಗೂ ಇತರ ಕಸಗಳನ್ನು ತೆರವುಗೊಳಿಸಿ ಒಟ್ಟು 86 ಕಸದ ಚೀಲಗಳನ್ನು ಸಂಗ್ರಹಿಸಲಾಯಿತು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಅಗತ್ಯತೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಡ ಎಂದು ಆನಂದದ ಸ್ರಷ್ಠೀ ತಂಡದ ಶ್ರೀನಿವಾಸ್ ಕುಂದರ್ ಹೇಳಿದರು.



ಕಾರ್ಯಕ್ರಮದಲ್ಲಿ ಕಂದಾವರ ಪಂಚಾಯತನ ಅಭಿವ್ರದ್ದಿ ಅಧಿಕಾರಿ ಸುನಿಲ್ ಕಾರ್ಯದರ್ಶಿ ಸಂಜೀವ, ಮಹಾಬಲೇಶ, ಕ್ಲೀನ ಕುಂದಾಪುರದ ಭರತ್ ಬಂಗೇರ, ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ವೇದಿಕೆಯ ಗಣೇಶ ಪುತ್ರನ್ ಭಾಗವಹಿಸಿದರು. ಗೀತಾನಂದ ಪೌಂಡೇಶನ್ ನ ರವಿಕಿರಣ ಕೋಟ, ಪ್ರಕಾಶ್ ಮತ್ತು ಮಿಥುನ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು.
