ಆನಂದ್ ಸಿ ಕುಂದರ್ ಸಮಾಜದ ಆಸ್ತಿ – ಭಾರತಿ ವಿ ಮಯ್ಯ
ಪಂಚವರ್ಣದಿಂದ ಆನಂದ್ ಸಿ ಕುಂದರ್ 78ನೇ ಹುಟ್ಟುಹಬ್ಬ ಆಚರಣೆ
ಕೋಟ: ಸಮಾಜದ ಕಣ್ಣಿರೊರೆಸುವ ಜತೆಗೆ ಕೋಟ ಭಾಗದ ಅದೆಷ್ಟೋ ಅಶಕ್ತ ಅನಾರೋಗ್ಯ ಪೀಡಿತರಿಗೆ ಆಶ್ರಯದಾತರಾಗಿ ತಮ್ಮ ಜೀವಿತ ಅವಧಿಯಲ್ಲಿ ಸರ್ವ ಶ್ರೇಷ್ಠ ಕಾಯಕ ಮಾಡುತ್ತಿರುವ ಆನಂದ್ ಸಿ ಕುಂದರ್ ರವರಿಗೆ ವ್ಯಕ್ತಿತ್ವಕ್ಕೆ ಪರ್ಯಾಯ ಇನ್ನೊಬ್ಬರಿಲ್ಲ. ಆನಂದ್ ಸಿ ಕುಂದರ್ ಈ ಸಮಾಜದ ದೊಡ್ಡ ಆಸ್ತಿ ಇಂತಹ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಹುಟ್ಟುಹಬ್ಬ ಆಚರಿಸಿ ಆಶ್ರಮಗಳಿಗೆ ನೆರವು ಕಾರ್ಯ ಅತ್ಯಂತ ಪ್ರಶಂಸನೀಯವಾದದ್ದು ಎಂದು ಸಾಂಸ್ಕೃತಿಕ ಚಿಂತಕಿ ಭಾರತಿ ವಿ ಮಯ್ಯ ಹೇಳಿದರು. ಅವರು ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಸಮಾಜಸೇವಕ, ಜಿಲ್ಲೆಯ ಮಹಾದಾನಿ ಆನಂದ್ ಸಿ ಕುಂದರ್ ರವರ 78ನೇ ಹುಟ್ಟುಹಬ್ಬ ಆಚರಣೆ ಹಾಗೂ ಆಶ್ರಮಕ್ಕೆ ನೆರವು ಎಂಬ ಶೀರ್ಷಿಕೆಯಡಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ವೇಳೆ ಬ್ರಹ್ಮಾವರದ ಮಟಪಾಡಿಯ ವಿಜಯ ಬಾಲನಿಕೇತನ ಅನಾಥ ಬಾಲಾಶ್ರಮಕ್ಕೆ ದಿನಸಿ ಪರಿಕರನ್ನು ಆನಂದ್ ಸಿ ಕುಂದರ್ ಆಶ್ರಮದ ಸಂಯೋಜಕ ಜಯರಾಮ ಇವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಜೊತೆಗೆ ಪರಿಸರ ಜಾಗೃತಿ ಪ್ರತಿಜ್ಞಾವಿಧಿ ಭೋದಿಸಲಾಯಿತು.

ಈ ಸಂದರ್ಭದಲ್ಲಿ ಕೋಟ ಪಂಚಾಯತ್ ಮಾಜಿ ಸದಸ್ಯ ಭುಜಂಗ ಗುರಿಕಾರ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿ,ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿ, ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.
