ಕೋಟ: ಗಾಡಿ ಕೂಸ ಪೂಜಾರಿ, ರಮಾನಾಥ ಜೋಗಿಯವರಿಗೆ ಪಂಚವರ್ಣದಿಂದ ನುಡಿನಮನ
ಕುಂದಾಪುರ: ಸಮಾಜದ ಬಗ್ಗೆ ಅಪಾರವಾದ ಗೌರವ ಮನ್ನಡೆ ಪಡೆದ ರಮಾನಾಥ ಜೋಗಿ ಹಾಗೂ ಕೂಸ ಪೂಜಾರಿಯವರ ಕೊಡುಗೆ ಅನನ್ಯವಾದದ್ದು ಎಂದು ಕೋಟದ ಸಾಂಸ್ಕೃತಿಕ ಚಿಂತಕ ಕೋಟ ಚಂದ್ರಶೇಖರ ಆಚಾರ್ ಹೇಳಿದರು.

ಶುಕ್ರವಾರ ಕೋಟದ ಪಂಚವರ್ಣದ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇತ್ತೀಚಿಗೆ ಅಗಲಿದ ಕೋಟದ ಇರ್ವರು ಗಣ್ಯರಾದ ಗಾಡಿ ಕೂಸ ಪೂಜಾರಿ ಹಾಗೂ ರಮಾನಾಥ ಜೋಗಿ ಇವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜದೊಂದಿಗೆ ಸಮಾಜಕ್ಕಾಗಿ ಶ್ರಮಿಸಿ ಅಪಾರ ಜನ್ನಮನ್ನಣೆ ಪಡೆದವರು ಇರ್ವರು ಮಹಾನ್ ಚೇತನರು,ಅವರ ಇರುವಿಕೆಯ ಕಾಲಘಟ್ಟದಲ್ಲಿ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಗಾಡಿ ಕೂಸ ಪೂಜಾರಿಯವರ ಕುರಿತಾಗಿ ನ್ಯಾಯವಾದಿ ಕೆ.ಅನಂತಪದ್ಮನಾಭ ಐತಾಳ್ ನುಡಿನಮನ ಸಲ್ಲಿಸಿದರು.
ರಮಾನಾಥ ಜೋಗಿ ಇವರ ಪುತ್ರ ಶಶಿಧರ ಜೋಗಿ, ಕೋಟ ಅಮೃತೇಶ್ವರೀ ದೇಗುಲದ ಅರ್ಚಕ ಅಶ್ಚಥ್ ಜೋಗಿ,ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಅಧ್ಯಕ್ಷ ಕೆ.ಮನೋಹರ್ ಪೂಜಾರಿ,ಮಹಿಳಾ ಮಂಡಲದ ಗೀತಾ ಹಾಡಿಕೆರೆ ಮತ್ತಿತರರು ಇದ್ದರು.ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿದರು.
