ತೆಕ್ಕಟ್ಟೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಕುಣಿತ ಭಜನಾ ಸ್ಪರ್ಧೆ – ಪೋಸ್ಟರ್ ಅನಾವರಣ
ಕುಂದಾಪುರ: ಕರಾವಳಿಯ ವಿಶಿಷ್ಟ ಭಕ್ತಿ ಪರಂಪರೆಯಾದ ಕುಣಿತ ಭಜನೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಕಲೆಯನ್ನು ಉಳಿಸುವ ಉದ್ದೇಶದಿಂದ ಇದೇ ಏಪ್ರಿಲ್ ೨೬ ರಂದು ಟೀಮ್ ಸಂಕೀರ್ತನಾ ಸಾಲಿಗ್ರಾಮ ಇವರ ನೇತೃತ್ವದಲ್ಲಿ ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಆಡಳಿತ ಮಂಡಳಿ ಇವರ ಸಹಕಾರದೊಂದಿಗೆ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ಆವರಣದಲ್ಲಿ ಅದ್ದೂರಿ ಕುಣಿತ ಭಜನಾ ಸ್ಪರ್ಧೆಯನ್ನು ಏರ್ಪಡಿಸಿದೆ.

ಈ ಕಾರ್ಯಕ್ರಮದಲ್ಲಿ ಗುರುವಂದನೆ,ಭಜನಾ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇರ್ವರು ಹಿರಿಯ ಭಜನಾ ಗುರುಗಳನ್ನು ಗುರುತಿಸಿ ಅವರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನ,ಸೇವೆಯ ಸಂಕಲ್ಪ ಈ ಕಾರ್ಯಕ್ರಮದ ಮೂಲಕ ಸಂಗ್ರಹವಾಗುವ ನಿಧಿಯ ಒಂದು ಭಾಗವನ್ನು ಸ್ಥಳೀಯ ನಿರಾಶ್ರಿತರ ಆಶ್ರಮಕ್ಕೆ ಸಹಾಯ ಹಸ್ತವಾಗಿ ನೀಡಲಿದೆ
ಪೋಸ್ಟರ್ ಬಿಡುಗಡೆ ತೆಕ್ಕಟ್ಟೆ ಶ್ರೀ ಗುರುರಾಘವೇಂದ್ರ ಮಂದಿರದಲ್ಲಿ ಜರಗಿತು.ಈ ಸಂದರ್ಭದಲ್ಲಿ ಮಂದಿರದ ಅರ್ಚಕರು,ಸಂಘಟಕರು ಉಪಸ್ಥಿತರಿದ್ದರು.
