ದ್ವಿತೀಯ ಪಿಯು ಫಲಿತಾಂಶ : ಹೆಮ್ಮಾಡಿಯ ಜನತಾಕ್ಕೆ ಸೆಕೆಂಡ್ ರ್ಯಾಂಕ್ – ರಶ್ಮಿ ಪೈ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ, 17ವಿದ್ಯಾರ್ಥಿಗಳು ಟಾಪರ್ಸ್
ಕುಂದಾಪುರ : 2025 – 26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟ ಗೊಂಡಿದ್ದು ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ರಶ್ಮಿ ಪೈ 598 ಅಂಕ ಪಡೆದ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು, ಜಿಲ್ಲೆಗೆ ಅಗ್ರಸ್ಥಾನಿಯಾಗಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ರಶ್ಮಿ ಪೈ 598, ಶ್ರಾವ್ಯ ದೇವಾಡಿಗ 597, ಅಕ್ಷತಾ ವೀರಣ್ಣ 596, ಪ್ರಜ್ಞಾ ಎಸ್ ಪೂಜಾರಿ 594, ಇಂಚರಾ ಅಶೋಕ್ 594, ಮಾನ್ಯ 592, ಪ್ರಸಾದ್ ಪೂಜಾರಿ 591, ಸ್ಮೃತಿಕಾ 590, ಧನ್ಯ ಬಿಲ್ಲವ 590 ಅಂಕ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶಮ್ಯ ಶೆಟ್ಟಿ 597, ಪ್ರಥಮ ಕಾಂಚನ್ 596, ಸುಚಿತ್ರ 595, ಅನ್ವಿತಾ 594, ಸಾನಿಕಾ 593, ಹಿರನ್ಮಯ್ 592, ಕಲ್ಪಿತಾ 592, ಪ್ರೀತನ್ 591 ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ಪೂರೈಸಿದ್ದ ರಶ್ಮಿ ಪೈ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿರುವುದು ಜನತಾ ಕಾಲೇಜಿಗೂ ಮನೆಯವರಿಗೂ ಹಾಗೂ ಜಿಲ್ಲೆಗೂ ಕೀರ್ತಿ ತಂದಿದ್ದಾಳೆ. ರಾಜೇಶ ಪೈ ಮತ್ತು ಪೂಜಾ ಪೈ ದಂಪತಿಯ ಪುತ್ರಿಯಾಗಿರುವ ರಶ್ಮಿ ಪೈ, ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರ ಮಾರ್ಗದರ್ಶನ ಮತ್ತು ಅನುಭವಿ ಉಪನ್ಯಾಸಕರ ಅರ್ಥಪೂರ್ಣ ಬೋಧನೆ ಜೊತೆಗೆ ಹೆತ್ತವರ ಪ್ರೋತ್ಸಾಹ ನನಗೆ ನನ್ನ ಸಾಧನೆಗೆ ದಾರಿದೀಪವಾಗಿದೆ. ಮುಂದೆ ಉಪನ್ಯಾಸಕಿಯಾಗುತ್ತೇನೆ ಎಂದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರಾಂಕ್ ಪಡೆದಿರುವ ಶಮ್ಯ ಶೆಟ್ಟಿಯವರು ಬಗ್ವಾಡಿ ಮೆತ್ತಿನಮನೆ ಸುಜಾತ ಸುರೇಂದ್ರ ಶೆಟ್ಟಿ ದಂಪತಿಗಳ ಪುತ್ರಿ. ಮುಂದೆ ಸಿ. ಎ ಮಾಡುವ ಕನಸು ಹೊತ್ತಿರುವ ಶಮ್ಯ ಶೆಟ್ಟಿ, ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ಹತ್ತನೇ ತರಗತಿ ಮುಗಿಸಿ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿನಿ.

ಕಳೆದ ನಾಲ್ಕು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಜಸ್ಟ್ ಪಾಸ್ ನಿಂದ ಶೇ 60 ಅಂಕ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಶೈಕ್ಷಣಿಕ ಸಾಧನೆ ಮಾಡಲಾಗುತ್ತಿದೆ. ಅನುಭವಿ ಉಪನ್ಯಾಸಕ ವೃಂದದವರ ಸತತ ಪರಿಶ್ರಮದಿಂದ ನಮ್ಮ ಮಕ್ಕಳು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಪ್ರಾಶುಪಾಲ ಗಣೇಶ್ ಮೊಗವೀರ ಹೇಳಿದ್ದಾರೆ. ಗ್ರಾಮೀಣ ಭಾಗದ ಹೆಚ್ಚಿನ ವಿದ್ಯಾರ್ಥಿಗಳು 10 ನೇ ತರಗತಿಯಲ್ಲಿ ಶೇಕಡಾ 40 ಅಂಕ ಪಡೆದ ವಿದ್ಯಾರ್ಥಿಗಳು ಶೇಕಡಾ 85.90 ಕ್ಕೂ ಹೆಚ್ಚು ಅಂಕಗಳಿಸಿರುವುದು ಜನತಾ ಕಾಲೇಜಿನ ಸಾಧನೆ ಎಂದು ಅವರು ಹೇಳಿದ್ದಾರೆ.
