ಕೋಡಿ ಕನ್ಯಾಣದ ರಾಮಪರ್ವದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ
ಸಂಘ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಪೂರಕ- ಆನಂದ್ ಸಿ ಕುಂದರ್.
ಕೋಟ: ಸಂಘಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಲಿಸುತ್ತವೆ ಇದಕ್ಕೆ ಇಲ್ಲಿನ ಕೋಡಿ ಶ್ರೀ ರಾಮ ಗೆಳೆಯರ ಬಳಗದ ಯೋಜನೆ ಯೋಚನೆ ಸಾಕ್ಷಿಯಾಗಿದೆ ಎಂದು ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು. ಶನಿವಾರ ಕೋಡಿ ಕನ್ಯಾಣದಲ್ಲಿ ಶ್ರೀ ರಾಮ ಗೆಳೆಯರ ಬಳಗ ಇದರ ವಾರ್ಷಿಕೋತ್ಸವ ರಾಮ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜ ಕಟ್ಟುವ ಕಾಯಕ ಇಂದಿನ ಯುವ ಜನಾಂಗದಿಂದಾಗಬೇಕು ಅಲ್ಲದೆ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಕಾರ್ಯಕ್ರಮ ರೂಪಿಸಿ ಗ್ರಾಮೀಣ ಹಳ್ಳಿ ಭಾಗಕ್ಕೆ ಅತೀ ಅವಶ್ಯವಾದ ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ 27 ನಿವೃತ್ತ ಯೋಧರನ್ನು ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂರ್ತೆದಾರ ಸಂಘದ ಸ್ಥಾಪಕಾಧ್ಯಕ್ಷ ಕೊರಗ ಪೂಜಾರಿ,ಯಕ್ಷಗಾನ ಸಾಮಾಜಿಕ ಕ್ಷೇತ್ರದ ರಾಘವೇಂದ್ರ ಕರ್ಕೇರ ಇವರನ್ನು ಅಭಿನಂದಿಸಲಾಯಿತು. ಕೋಡಿ ಕನ್ಯಾಣ ಸರಕಾರಿ ಶಾಲೆಯ ದೈಹಿಕ ಶಿಕ್ಷಕ ವಿಜಯ ನಾಯರಿ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ರಾಮಗೆಳೆಯರ ಬಳಗದ ಅಧ್ಯಕ್ಷ ಯಾದವ ಕರ್ಕೇರ ವಹಿಸಿದ್ದರು. ಶ್ರೀಕೃಷ್ಣ ಪ್ರಸಾದ ಕ್ಯಾಶು ಇಂಡಸ್ಟ್ರಿ ಮಾಲಿಕ ಸಂಪತ್ ಶೆಟ್ಟಿ, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ಶ್ರೀರಾಮ ಪ್ರಸಾದಿತ ಯಕ್ಷಗಾನ ಸಂಘದ ಅಧ್ಯಕ್ಷ ಕೋಡಿ ಜಗನಾಥ್ ಅಮೀನ್,ಕೋಡಿ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ್ ಮೆಂಡನ್, ಶ್ರೀ ಮಾರಿಕಾಂಬಾ ದೇಗುಲದ ಅಧ್ಯಕ್ಷ ಕೃಷ್ಣಮಾಸ್ಟರ್, ಮಾಜಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಉದ್ಯಮಿ ಪ್ರಜ್ವಲ್, ಉಡುಪಿ ಅಜ್ಜರಕಾಡು ಆಸ್ಪತ್ರೆಯ ರವೀಂದ್ರ ಖಾರ್ವಿ, ಕ್ಯಾಲಿಟಿ ಸೀ ಪುಡ್ ಮಾಲಿಕ ಶಂಕರ್ ಕುಂದರ್, ಪಿಡಿಒ ಹರೀಶ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಂಘದ ನಿಖಿಲ್ ಕರ್ಕೇರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪ್ರಣುತ್ ಗಾಣಿಗ ನಿರೂಪಿಸಿದರು. ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯಮಯ ಕಾರ್ಯಕ್ರಮ, ಅರೆಹೊಳೆ ಪ್ರತಿಷ್ಠಾನ ಇವರಿಂದ ಮಂದಾರ್ತಿ ಮಾದೇವಿ ನೃತ್ಯ ರೂಪಕ ಪ್ರದರ್ಶನಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀಶಾ ಆಚಾರ್ ಪಾಂಡೇಶ್ವರ ನಿರ್ವಹಿಸಿದರು.
