BlogCrime newsGovernmentHighlightsHuman storiesLifestyleLocal newsOthersState newsSuccess storiesTop StoriesTrending

ಹನಿಟ್ರ್ಯಾಪ್ ಸೇರಿದಂತೆ 11 ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಶಶಾಂಕ್ ಶೆಟ್ಟಿ ಅರೆಸ್ಟ್

Aware others:

ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಗುಲ್ವಾಡಿ ಸೌಕೂರು ಆಳ್ವರ ಮನೆಯ ಶೇಖರ ಶೆಟ್ಟಿ ಎಂಬುವರ ಪುತ್ರ, ಶಶಾಂಕ್ ಶೆಟ್ಟಿ (32) ಯಾನೆ ಶಶಿಕಿರಣ್‌ ಯಾನೆ ಕಿರಣ್‌ ಶೆಟ್ಟಿ ಯಾನೆ ರಾಕೇಶ್‌ ಯಾನೆ ಶಶಿ ಎಂದು ಗುರುತಿಸಲಾಗಿದೆ.

ಆರೋಪಿ ಶಶಾಂಕ್ ವಿರುದ್ಧ ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆಯಲ್ಲಿ 7 ಪ್ರಕರಣ, ಹೆಬ್ರಿಯಲ್ಲಿ ಒಂದು, ಕಲಘಟಕಿಯಲ್ಲಿ ಒಂದು, ಕೋಟ-ದಲ್ಲಿ ಒಂದು, ಹಾಗೂ ಬೆಂಗಳೂರು ಚಂದ್ರ ಲೇ ಔಟ್ ನಲ್ಲಿ ಒಂದು ಕಳ್ಳತನ, ಸುಲಿಗೆ, ಹನಿಟ್ರ್ಯಾಪ್ ಗಳಂತಹ ಒಟ್ಟು 11 ಪ್ರಕರಣಗಳು ದಾಖಲಾಗಿದ್ದವು.  ಈತನ ವಿರುದ್ಧ ನ್ಯಾಯಾಲಯವು ಈವರೆಗೆ 12 ಬಾರಿ ವಾರೆಂಟ್ ಹೊರಡಿಸಿತ್ತು. ಆದರೆ ಈತ 4 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಈತನನ್ನು ಫೆ.15 ರಂದು ಕುಂದಾಪುರ ತಾಲೂಕು ಬಿದ್ಮಲ್ ಕಟ್ಟೆ ಎಂಬಲ್ಲಿ ಕುಂದಾಫುರ ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!