ಕುಂದಾಪುರ: ಉಭಯ ಜಿಲ್ಲಾಮಟ್ಟದ ಪವರ್ ಲಿಪ್ಟಿಂಗ್ ನಲ್ಲಿ ಹರ್ಕ್ಯೂಲಸ್ ಜಿಮ್ ಸಂಸ್ಥೆಗೆ ಮೂರು ಚಿನ್ನ, ಎರಡು ಬಲಿಷ್ಟ ಪುರುಷ ಪ್ರಶಸ್ತಿ

ಕುಂದಾಪುರ: ಮಂಗಳೂರಿನ ಕೂಳೂರು ಸ್ಪೋರ್ಟ್ಸ್ ಪ್ರಮೋಟರ್ಸ್ ಅವರ ಸಂಯೋಜನೆಯಲ್ಲಿ, ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಪವರ್ ಲಿಫ್ಟಿಂಗ್ ಸಂಸ್ಥೆ ಅವರ ಸಹಭಾಗಿತ್ವದಲ್ಲಿ ನಡೆದ ಕರ್ನಾಟಕ ರಾಜ್ಯ ಮಾಸ್ಟರ್ಸ್ ಮತ್ತು ದಕ್ಷಿಣ ಕನ್ನಡ,ಉಡುಪಿ ಜಿಲ್ಲಾ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧಾಕೂಟ – 2026ರಲ್ಲಿ ಕುಂದಾಪುರದ ನ್ಯೂ ಹರ್ಕ್ಯೂಲಸ್ ಜಿಮ್ ಸಂಸ್ಥೆಗೆ ಮೂರು ಚಿನ್ನ, ಎರಡು ಬಲಿಷ್ಟ ಪುರುಷ ಪ್ರಶಸ್ತಿ ಒಲಿದಿದೆ.

ಪೆಬ್ರುವರಿ 14,15ರಂದು ನಡೆದ ಈ ಕ್ರೀಡಾಕೂಟದ 66 ಕೆಜಿ M-2 ವಿಭಾಗದಲ್ಲಿ Classic ಹಾಗೂ Equipped – ಎರಡು ವಿಭಾಗಗಳಲ್ಲಿ ಸ್ಪರ್ಧಿಸಿದ್ದ ನ್ಯೂ ಹರ್ಕ್ಯೂಲಸ್ ಜಿಮ್ ಸಂಸ್ಥೆಯ ಮಾಲಕ, ಅಂತರ್ರಾಷ್ಟ್ರೀಯ ಫವರ್ ಲಿಪ್ಟರ್ ಸತೀಶ್ ಖಾರ್ವಿ ಅವರು ಎರಡು ಚಿನ್ನದ ಪದಕಗಳು ಹಾಗೂ ಕರ್ನಾಟಕದ ಬಲಿಷ್ಠ ಪುರುಷ – 2026” ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅಲ್ಲದೇ ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ ಸಂಸ್ಥೆಯ ಸದಸ್ಯ, ಸತೀಶ್ ಖಾರ್ವಿಯವರ ಶಿಷ್ಯ ಕಾರ್ತಿಕ್ ಪೂಜಾರಿ ಅವರು 93 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಮಟ್ಟದ ಬಲಿಷ್ಠ ಪುರುಷ – 2026 ಪ್ರಶಸ್ತಿ ಪಡೆದುಕೊಂಡಿದ್ದಾರೆ.
