BlogCrime newsEntertainmentFashionHighlightsHuman storiesLifestyleLocal newsOthersState newsTop StoriesTrending

ಮೊಳಹಳ್ಳಿಯಲ್ಲಿ ಅಕ್ರಮ ಮರಳುಗಾರಿಕೆ : 22 ಜನರ ವಿರುದ್ಧ ಪ್ರಕರಣ ದಾಖಲು, ಸೊತ್ತುಗಳು ವಶ

Aware others:

ಕುಂದಾಪುರ: ಕುಂದಾಫುರ ತಾಲೂಕಿನ ತಾಲೂಕು  ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ ಕೋಟ ಪೊಲೀಸು ಅಕ್ರಮ ದಂಧೆಗೆ ಬಳಸಿದ್ದರೆನ್ನಲಾದ ಬೋಟುಗಳ ಸಹಿತ 22 ಜನರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು  ದೇವಾನಂದ ಶೆಟ್ಟಿ, ಹಳ್ನಾಡು, ಉತ್ತರ ಪ್ರದೇಶ ಮೂಲದವರಾದ ಅಮರೇಶ(27),  ಕೃಪಾಲ್‌(32),  ಪರಶುರಾಮ(35), ಪ್ರಬೀನ್‌(20), ರಾಮಚರಣ್‌(35), ಸತ್ರೊಹನ್‌ (28),  ರಾಮ ಅವತಾರ್‌ (21), ಬಿಮಲೇಶ್‌(23), ರಾಮಲಾಲ್‌(40), ಬೊಲಾ(23ಸಂಜಯ (27ಹಿರಿದೆ ರಾಮ(27), ಸರ್ವನ್‌(21), ಮುಖೇಶ(24), ಕರಣ್‌(21), ಪ್ರೀನ್ಸ್‌  (19), ಕಿಶುನ್‌(19), ಸುರಾಜ(30), ನೀರಾಜ(22), ಕಲ್ಲು(19), ಮತ್ತು ರಾಜಿವ(26) ಎಂದು ಗುರುತಿಸಲಾಗಿದೆ.

ಪೊಲೀಸ್‌ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಕೋಟ ಠಾಣಾ ಪಿ.ಎಸ್.‌ಐ. ಪ್ರವೀಣ್‌ ಕುಮಾರ್‌ ಆರ್. ‌ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿತ್ತು. ಸುಮಾರು ಎಂಟೂವರೆ ಲಕ್ಷ ಮೌಲ್ಯದ  315 ಯುನಿಟ್‌ ಮರಳು, ಮೂರು ಲಕ್ಷ ಮೌಲ್ಯದ ಮೂರು ಪೈಬರ್‌ ಬೋಟ್, ಸೇರಿದಂತೆ ಸಾವಿರದ ನಾನೂರ ರೂಪಾಯಿ ಮೌಲ್ಯದ  ಆರು ಕಬ್ಬಿಣದ ಹಾರೆ ಹಾಗೂ ಎಂಟು ಪೈಬರ್‌ ಬುಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!