HighlightsLocal newsPoliticsState newsTrending

ಬೈಂದೂರು: ಬಿಜೆಪಿಯ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿಯೇ ಸಿದ್ಧ : ರಾಜಾಹುಲಿಗೆ ಹಿಂದೂ ಹುಲಿ ಗುಟುರು!

Aware others:

ಬೈಂದೂರು: ಇಷ್ಟು ದಿನ ಎಲ್ಲವನ್ನೂ ಸಹಿಸುತ್ತಾ ಬಂದ ಈ ಈಶ್ವರಪ್ಪ ರಾಜ್ಯ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣವನ್ನು ಕೊನೆಗಾಣಿಸುವ ತನಕ ವಿರಮಿಸುವುದಿಲ್ಲ ಎಂದು ರಾಜ್ಯದ ಮಾಜೀ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಗುಡುಗಿದ್ದಾರೆ. ಅವರು ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಉಪ್ಪುಂದದ ಪರಿಚಯದಲ್ಲಿರುವ ದೇವಕಿ ಸಭಾಭವನದಲ್ಲಿ ರಾಷ್ಟ್ರ ಭಕ್ತ ಬಳಗ ವತಿಯಿಂದ ಆಯೋಜಿಸಲಾಗಿದ್ದ ಬೈಂದೂರು ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಹಿಂದುತ್ವಕ್ಕಾಗಿ ತಮ್ಮ ಪ್ರಾಣವನ್ಙೇ ಕೊಡಲು ಸಿದ್ಧವಾಗಿದ್ದ ಬಿಜೆಪಿಯ ಅಪ್ಪಟ ಹಿಂದೂ ಕಾರ್ಯಕರ್ತರಿಗೆ ನಿರಂತರವಾಗಿ ವಂಚಿಸಲಾಗುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಹೊಂದಾಣಿಕೆ ರಾಜಕೀಯದ ಮೂಲಕ ತನ್ನ ಕುಟುಂಬ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಯಡಿಯೂರಪ್ಪನವರಷ್ಟೇ ಈ ಈಶ್ವರಪ್ಪನೂ ಕೆಲಸ‌ ಮಾಡಿದ್ದಾನೆ ಎನ್ನುವುದನ್ನು ಯಾವ ಕಾರ್ಯಕರ್ತರೂ ಮರೆತಿಲ್ಲ. ಕೇವಲ ತಮ್ಮ ಸ್ವಾರ್ಥ ರಾಜಕೀಯ, ಕುಟುಂಬ ರಾಜಕೀಯವನ್ನೇ ಮಾಡಿಕೊಂಡು ಬಂದಿರುವ ಯಡಿಯೂರಪ್ಪನವರ ವಿರುದ್ಧ ನನ್ನ ಈ ಹೋರಾಟ ಎಂದರು. 

ಈಶ್ವರಪ್ಪ ಮಾತನಾಡುತ್ತಿರುವುದು

ಈ ಚುನಾವಣೆ ಕೇವಲ ಚುನಾವಣೆಯಲ್ಲ. ಇದು ಹಣ ಬಲ ಮತ್ತು ದೇಶಭಕ್ತಿಯ ವಿರುದ್ದದ ಸಮರ. ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಹಿಂದುತ್ವವನ್ನು ನನ್ನ ಉಸಿರಾಗಿಸಿಕೊಂಡು ರಾಜಕೀಯ ಸಂಘಟನೆ. ನಾಯಕರ ಒತ್ತಡಕ್ಕೆ ಮಣಿದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕೈಬಿಟ್ಟಿದ್ದು ನಾನು ಮಾಡಿದ ಮೊದಲ ತಪ್ಪು ಎಂದ ಅವರು, ಹಿಂದುತ್ವವನ್ನು ಒಪ್ಪಿಕೊಂಡಿರುವ ಕಾರ್ಯಕರ್ತರು ನನ್ನ ಜೊತೆಗಿದ್ದಾರೆ. ಕನಿಷ್ಟ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವೆ ಎಂದರು. ನಾನು ಯಾವತ್ತೂ ಕಾರ್ಯಕರ್ತರ ಜೊತೆಗಿರುವೆ ಎಂದ ಅವರು, ಕಾರ್ಯಕರ್ತರೂ ನನ್ನ ಕೈಬಿಡುವುದಿಲ್ಲ ಎಂದರು. ವೇದಿಕೆಯಲ್ಲಿ ರಾಷ್ಟ್ರಭಕ್ತ ಬಳಗ ಬೈಂದೂರು ಇದರ ಮುಖಂಡರಾದ ಶ್ರೀಧರ ಬಿಜೂರು, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜೀ ಸದಸ್ಯ ಗೋಪಾಲ ನಾಡ, ಸುವರ್ಣ ಪೂಜಾರಿ, ಈಶ್ವರಪ್ಪ ಪುತ್ರ ಕಾಂತೇಶ್, ಮೀನುಗಾರ ಮುಖಂಡ ಯಶು ಗಂಗೊಳ್ಳಿ, ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಪೂಜಾರಿ, ಪಟ್ಟಣ ಪಂಚಾಯತ್ ಸದಸ್ಯ ಗಣೇಶ್ ರಾವ್, ಪಟ್ಟಣ ಪಂಚಾಯತ್‌ ಮುಖಂಡ ಗೋಪಾಲ ಗಾಣಿಗ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು


Aware others:

Leave a Reply

Your email address will not be published. Required fields are marked *

error: Content is protected !!