BlogLocal newsOthersPoliticsTrending

ಫ್ಲೈಯಿಂಗ್ ಸ್ಕ್ವಾಡ್ ರೇಡ್ : ಬಿರಿಯಾನಿ ಸೀಝ್ – ಊಟವಿಲ್ಲದೇ ವಾಪಾಸು ಹೋದ ಕಾರ್ಯಕರ್ತರು.!!

Aware others:

ಬೈಂದೂರು: ಭಾನುವಾರ ಬೈಂದೂರಿನ ಉಪ್ಪುಂದ ಪರಿಚಯ ಹೋಟೆಲ್ ನ ದೇವಕಿ ಆರ್ ಸಭಾಂಗಣದಲ್ಲಿ ನಡೆದ ರಾಷ್ಟ್ರ ಭಕ್ತರ ಬಳಗದ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಸಿದ್ಧಪಡಿಸಿಡಲಾದ ಬಿರಿಯಾನಿಯನ್ನು ಚುನಾವಣಾ ವೀಕ್ಷಣಾಧಿಕಾರಿಗಳು ಸೀಝ್ ಮಾಡಿದ್ದಾರೆ. ಈ ಸಮಾವೇಶದಲ್ಲಿ ರಾಜ್ಯದ ಮಾಜೀ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಆಗಮಿಸಿದ್ದು, ಬಿಜೆಪಿ ಮುಖಂಡ ಬಿಎಸ್. ಯಡಿಯೂರಪ್ಪ ಹಾಗೂ ಅವರ ಮಕ್ಕಳ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದರು.

ಸಮಾವೇಶಕ್ಕೆ ಆಗಮಿಸಿದ್ದ ಕಾರ್ಯಕರ್ತರಿಗೆ ಮಧ್ಯಾಹ್ನದ ಊಟಕ್ಕಾಗಿ ಜನರಿಗೆ ಬಿರಿಯಾನಿ ಸಿದ್ಧವಾಗುತ್ತಿತ್ತು. ಆದರೆ ಅದಾಗಲೇ ಸುದ್ದಿ ಪಡೆದ ಚುನಾವಣಾಧಿಕಾರಿಗಳು (ಫ್ಲೈಯಿಂಗ್ ಸ್ಕ್ವಾಡ್ ) ತಂಡ ದಾಳಿ ನಡೆಸಿ ಬಿರಿಯಾನಿ ಸಪ್ಲೈ ಮಾಡಿದರೆ ಚುನಾವಣೆ ವೆಚ್ಚಕ್ಕೆ ಸೇರ್ಪಡೆಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ತಯಾರಾಗುತ್ತಿದ್ದ ಬಿರಿಯಾನಿ ಅರ್ಧದಲ್ಲೇ ಬಾಕಿಯಾಗಿದೆ. ಕೊನೆಗೂ ಮಧ್ಯಾಹ್ನ ಬಿರಿಯಾನಿ ಊಟದ ಾಸೆಯಲ್ಲಿ ಬಂದಿದ್ದ ಕಾರ್ಯಕರ್ತರು ಖಾಲಿ ಹೊಟ್ಟೆಯಲ್ಲಿ ಉಪವಾಸ ಹೋಗಬೇಕಾಯಿತು. ಈ ಸಂದರ್ಭ ದಾಳಿ ನಡೆಸಿದ ಪ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಕಾರ್ಯಕರ್ತರು ಹಿಡಿ ಶಾಪ ಹಾಕಿದ ಘಟನೆಯೂ ನಡೆಯಿತು.

Lorem ipsum dolor sit amet, consectetur adipiscing elit, sed do eiusmod tempor incididunt ut labore et dolore magna aliqua.


Aware others:

Leave a Reply

Your email address will not be published. Required fields are marked *

error: Content is protected !!