BlogCulturalEconomyEntertainmentFashionHighlightsHuman storiesLifestyleLocal newsOthersTop StoriesTrending

ಬೈಂದೂರು; ಜನವರಿ 24, 25 ಮತ್ತು 26ರಂದು ಬೈಂದೂರು ಉತ್ಸವ – ಶಾಸಕ ಗುರುರಾಜ್ ಗಂಟಿಹೊಳೆ

Aware others:

ಬೈಂದೂರು: ಈ ಬಾರಿಯ ಬೈಂದೂರು ಉತ್ಸವ 2026  ಜ 24 ರಿಂದ 26 ರ ವರೆಗೆ ಮೂರು ದಿನಗಳ ಕಾಲ ಬೈಂದೂರಿನ ಗಾಂಧಿ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದ್ದಾರೆ. ಅವರು ಮಂಗಳವಾರ ಬೈಂದೂರು ಪ್ರವಾಸಿ ಮಂದಿರದಲ್ಲಿ ಬೈಂದೂರು ಉತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಂಸದ ಬಿ.ವೈ.ರಾಘವೇಂದ್ರ ಅವರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದ ಅವರು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕ‌ರ್, ಶಿವರಾಜ ತಂಗಡಗಿ, ರಾಮಲಿಂಗಾ ರೆಡ್ಡಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಸುನಿಲ್ ಕುಮಾರ್, ಗುರ್ಮೆ ಸುರೇಶ ಶೆಟ್ಟಿ ಯಶಪಾಲ್ ಸುವರ್ಣ, ಕಿರಣ್ ಕುಮಾ‌ರ್ ಕೊಡ್ಲಿ ಭಾಗವಹಿಸಲಿದ್ದಾರೆ ಎಂದರು.

ಸಾಂಸ್ಕೃತಿಕ ಕಲರವ: ನೃತ್ಯ ನಾಟಕ, ಭಕ್ತಿ ಸಂಭ್ರಮ, ಸ್ವರಸಂಜೆ, ಜಾದೂ ಲೋಕ, ಅಳ್ವಾಸ್‌ ವೈಭವ, ಗಾನ ನಾಟ್ಯ ವೈಭವ, ಲೈವ್ ಸಂಗೀತ ಹಬ್ಬ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಚಿತ್ರ ತಾರೆಯರಾದ ರಿಷಬ್ ಶೆಟ್ಟಿ ರಾಜ್ ಬಿ.ಶೆಟ್ಟಿ ರವಿ ಬಸೂರು, ಶನಿಲ್ ಗೌತಮ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ಕೃಷಿ, ಮೀನುಗಾರಿಕೆ ಮೇಳ, ಅರಣ್ಯ ಜಾಂಬೂರಿ, ಆರೋಗ್ಯ, ಸಾಹಿತ್ಯ, ವಿಜ್ಞಾನ, ಉದ್ಯೋಗ ಮೇಳ, ಬೀಚ್ ಉತ್ಸವ ನಡೆಯಲಿದೆ ಎಂದರು.

ಉತ್ಸವದಲ್ಲಿ ಕಳರಿ-ಬೆಂಕಿಯಾಟ, ನಾನಾ ಗೋಷ್ಠಿಗಳು, ಪುಸ್ತಕ ಸಂತೆ, ಕಾರ್ಟೂನ್ ಹಬ್ಬ, ಚೆಂಡೆ, ಡೋಲು ವಾದನ, ಕೀಲುಕುದುರೆ, ಹೋಳಿ ಕುಣಿತ, ಭಜನೆ, ಟ್ಯಾಲೆಂಟ್ ಬೈಂದೂರು, ಹುಲಿ ಹೆಜ್ಜೆ, ಅಮ್ಯೂಸ್ ಮೆಂಟ್ ಪಾರ್ಕ್‌, ವಾರ್‌ಜ್, ಇಲ್ಯಾಣಿ ಬೈಂದೂರು, ಬಾಯಿ ಪಟಾಕಿ, ಹೆಬ್ಬಾಗಿಲು ಮನೆ, ಬೈಂದೂರಿನ ದೇಗುಲಗಳ ಪ್ರತಿರೂಪ, ಭಜನಾ ಕುಣಿತ, ಕರುಗಳ ಪ್ರದರ್ಶನ, ಜಾನುವಾರು ಪ್ರದರ್ಶನ, ಕಂಬಳ ಸೇರಿದಂತೆ ಹಲವು ವಿಶೇಷ ಆಕರ್ಷಣೆಗಳಿವೆ ಎಂದರು. ಉತ್ಸವ ನಡೆಯಲಿದೆ ಎಂದರು.

ಗ್ರಾಮೋತ್ಸವ ಯಶಸ್ವಿ: ಬೈಂದೂರು ಉತ್ಸವದ ಅಂಗವಾಗಿ ಕ್ಷೇತ್ರದ ಎಲ್ಲಾ 43 ಗ್ರಾ.ಪಂ.ಗಳಲ್ಲಿಯೂ ಗ್ರಾಮೋತ್ಸವಗಳನ್ನು ಸಂಘಟಿಸಿ, ಸರಕಾರದ ಆಡಳಿತವನ್ನು ಗ್ರಾಮದ ಬಳಿಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದು, ಇದಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ದೊರೆತಿದೆ. ಕ್ಷೇತ್ರ ವ್ಯಾಪ್ತಿಯ ಸುಮಾರು 48 ಸಾವಿರಕ್ಕೂ ಅಧಿಕ ಮಂದಿ ಗ್ರಾಮೋತ್ಸವಗಳಲ್ಲಿ ಪಾಲ್ಗೊಂಡಿದು ವುದು ವಿಶೇಷವಾಗಿತ್ತು. ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತದ ವಿಶೇಷ ಸ್ಪಂದನೆಯಿಂದಾಗಿ ಇದು ದೊಡ್ಡ ಮಟ್ಟದಲ್ಲಿ ಯಶಸ್ಸಾಗಲು ಕಾರಣವಾಗಿದೆ ಎಂದರು. ಬೈಂದೂರು ಉತ್ಸವ ಸಮಿತಿಯ ಸಂಚಾಲಕ ಶ್ರೀಗಣೇಶ, ಸುರೇಶ ಬಟ್ಟಾಡಿ, ಅನಿತಾ, ಜಯಾನಂದ ಹೋಬಳಿದಾ‌ರ್, ರಾಜಶೇಖರ ದೇವಾಡಿಗ, ಪ್ರದೀಪಕುಮಾ‌ರ್ ಶೆಟ್ಟಿ ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!