ಹಳ್ಳಿಹೊಳೆಯಲ್ಲಿ ಗ್ರಾಮೋತ್ಸವ ಸಂಪನ್ನ – ಆರೋಗ್ಯ ತಪಾಸಣೆ, ಮೇಳಗಳು, ಕೃಷಿ ಪ್ರದರ್ಶನ, ಮಾಹಿತಿ ಕಾರ್ಯಕ್ರಮ
ಕುಂದಾಪುರ: ಬೈಂದೂರು ಉತ್ಸವ 2026ರ ಅಂಗವಾಗಿ ಗ್ರಾಮ ಪಂಚಾಯತ್ ಹಳ್ಳಿಹೊಳೆ ನೇತೃತ್ವದಲ್ಲಿ, ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಸೋಮವಾರ ಹಳ್ಳಿಹೊಳೆ ಪಂಚಾಯತ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಹಳ್ಳಿಹೊಳೆ ಗ್ರಾಮೋತ್ಸವ ಸಂಪನ್ನಗೊಂಡಿತು.

ಹಳ್ಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಶೆಟ್ಟಿ ಅವರು ಹಳ್ಳಿಹೊಳೆ ಗ್ರಾಮೋತ್ಸವ ಉದ್ಘಾಟಿಸಿ ಮಾತನಾಡಿ, ಗ್ರಾಮೋತ್ಸವದ ಮೂಲಕ ಶಾಸಕರ ವಿಶೇಷ ಮುತುವರ್ಜಿಯಿಂದ ಎಲ್ಲಾ ಇಲಾಖೆಗಳು ಗ್ರಾಮ ಮಟ್ಟಕ್ಕೆ ಬಂದು ಮಾಹಿತಿ ನೀಡುತ್ತಿದ್ದಾರೆ. ಇದು ಉತ್ತಮ ಕಾರ್ಯಕ್ರಮವಾಗಿದ್ದು, ಬೈಂದೂರು ಉತ್ಸವ 2026 ಯಶಸ್ವಿಯಾಗಿ ನಡೆಯಲಿ ಎಂದರು.
ಬೈಂದೂರು ಉತ್ಸವ ಸಮಿತಿ ಸಂಚಾಲಕ ಶ್ರೀಗಣೇಶ್ ಗಾಣಿಗ ಉಪ್ಪುಂದ ಮಾತನಾಡಿ, ಪ್ರತಿ ಗ್ರಾಮದಲ್ಲಿ ಗ್ರಾಮೋತ್ಸವ ಏರ್ಪಡಿಸಿ ಆರೋಗ್ಯ ತಪಾಸಣಾ ಮೇಳಗಳು, ಕೃಷಿ ಪ್ರದರ್ಶನ, ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಗಿರಿಜಾ, ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಡಾ ಶ್ರಾವ್ಯ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾಗೀರಥಿ, ಪ್ರಸಾದ್ ನೇತ್ರಾಲಯ ವೈದ್ಯ ಮೋಹನ್, ಕಟ್ಟಡ ಕಾರ್ಮಿಕ ಇಲಾಖೆಯ ಅಧಿಕಾರಿ ಡಾ ಪಲ್ಲವಿ ರೆಡ್ಡಿ, ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಿವೇದಿತಾ, ಪ್ರಸಿದ್ದಿ ಸೋಲಾರ್ ನ ರಾಕೇಶ್ ಶೆಟ್ಟಿ, ಬೈಂದೂರು ತಾಲೂಕು ಕೃಷಿ ಅಧಿಕಾರಿ ಗಾಯತ್ರಿ, ಹೊಸಂಗಡಿ ಜೆ. ಇ ಕೃಷ್ಣ, ನಮ್ಮ ಭೂಮಿ ಅಧಿಕಾರಿ ಗಣೇಶ್, ಪಶು ಸಂಗೋಪನಾ ಇಲಾಖೆಯ ಡಾ ಹರೀಶ್, ತೋಟಗಾರಿಕೆ ಇಲಾಖೆಯ ಅಧಿಕಾರಿ ಪ್ರವೀಣ್, ಎ. ಜೆ ಆಸ್ಪತ್ರೆಯ ಜನರಲ್ ಮೆಡಿಸಿನ್ ಡಾ ಉತ್ಸವ ಶೆಟ್ಟಿ, ದಂತ ವೈದ್ಯ ಡಾ ಲೆನಾ, ಆಯುರ್ವೇದ ಹಿರಿಯ ವೈದ್ಯ ಡಾ ಪ್ರದೀಪ್ ಶೆಟ್ಟಿ, ಬೈಂದೂರು ಉತ್ಸವ ಸಂಚಾಲಕ ವೀರಭದ್ರ ಶೆಟ್ಟಿ, ಹಾಗೂ ಪಂಚಾಯತ್ ಸದಸ್ಯರು ವೇದಿಕೆಯಲ್ಲಿ ಇದ್ದರು.
ಹಳ್ಳಿಹೊಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುದರ್ಶನ್ ಸ್ವಾಗತಿಸಿದರು. ಸಿ.ಆರ್.ಪಿ ರಾಘವೇಂದ್ರ ಡಿ ನಿರೂಪಿಸಿದರು. ಪಂಚಾಯತ್ ಸದಸ್ಯ ಪ್ರದೀಪ್ ಕೊಠಾರಿ ವಂದಿಸಿದರು.
