BlogCulturalEducationEntertainmentFashionHighlightsHuman storiesLifestyleLocal newsReligionTop StoriesTrending

ಜನವರಿ 25: ಕುಂದಾಪುರದ ಸಾಧನ ಕಲಾ ಸಂಗಮ ಮತ್ತು ಅಪ್ರಮೇಯದಿಂದ ತ್ರಿಮಧುರ – 2026 ಕಾರ್ಯಕ್ರಮ

Aware others:

ಕುಂದಾಪುರ: ಕಳೆದ 17 ವರ್ಷಗಳಿಂದ ಕುಂದಾಪುರದಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯಾಚರಿಸುತ್ತಿರುವ ಸಾಧನ ಕಲಾ ಸಂಗಮ ಮತ್ತು ಅಪ್ರಮೇಯ ಸಂಸ್ಥೆಯು ಹಮ್ಮಿಕೊಂಡಿರವ “ತ್ರಿಮಧುರ – 2026” ಕಾರ್ಯಕ್ರಮವು ಕುಂದಾಪುರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿರುವ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಕನವರಿ 25ರ ಭಾನುವಾರ ಸಂಜೆ 3.30ಕ್ಕೆ ನಡೆಯಲಿದೆ ಎಂದು ಉಭಯ ಸಂಸ್ಥೆಗಳ ವಿಶ್ವಸ್ಥ ನಾರಾಯಣ ಐತಾಳ್ ತಿಳಿಸಿದ್ದಾರೆ.

ಸಂಜೆ ಸರಿಯಾದ ಸಮಯಕ್ಕೆ ಆರಂಭಗೊಳ್ಳಲಿರುವ ಈ ಕಾರ್ಯಕ್ರಮವನ್ನು ಗರಿಕೆಮಠದ ವೇ। ಮೂ। ರಾಮಪ್ರಸಾದ್ ಅಡಿಗ ಉದ್ಘಾಟಿಸಲಿದ್ದಾರೆ. 

ಕೋಟದ ಗೀತಾನಂದ ಫೌಂಡೇಶನ್ ನ ಪ್ರವರ್ತಕ ಆನಂದ ಸಿ. ಕುಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಧನಾ ಕಲಾ ಸಂಗಮ (ರಿ.) ಇದರ ವಿಶ್ವಸ್ಥ ನಾರಾಯಣ ಐತಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. 

ಮಂಗಳೂರಿನ ಖ್ಯಾತ ವಯೋಲಿನ್ ವಿದುಷಿ ಕು| ಧನಶ್ರೀ ಶಭರಾಯ ಅವರಿಂದ ವಯಲಿನ್ ವಾದನ ಕಾರ್ಯಕ್ರಮ ನಡೆಯಲಿದೆ. ಮಣಿಪಾಲದ ವಿದ್ವಾನ್ ಬಾಲಚಂದ್ರ ಆಚಾರ್ಯ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.

ಬಳಿಕ ಎರಡನೇ ಭಾಗದಲ್ಲಿ ಮಾಲಿನಿ ರಮೇಶ್ ಮತ್ತು ಕು| ಶ್ರಾವ್ಯ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಣಿಪಾಲದ ವಿದ್ವಾನ್ ಬಾಲಚಂದ್ರ ಆಚಾರ್ಯ ಮೃದಂಗದಲ್ಲಿ ಹಾಗೂ ವಿದುಷಿ ಕು| ಧನಶ್ರೀ ಶಭರಾಯ ವಯಲಿನ್ ಸಾಥ್‌ನೀಡಲಿದ್ದಾರೆ.

ತೃತೀಯ ಭಾಗದಲ್ಲಿ ಖ್ಯಾತ ಬಾನ್ಸುರಿ ವಾದಕ ವಿದ್ವಾನ್ ಸುಧೀರ್ ಹೆಗಡೆ ಕುಮಟಾ ಅವರಿಂದ ಬಾನ್ಸುರಿ ವಾದನ, ತಬಲಾದಲ್ಲಿ ವಿದ್ವಾನ್ ನಿತಿನ್ ಹೆಗಡೆ ಸಿದ್ಧಾಪುರ ಸಾಥ್ ನೀಡಲಿದ್ದಾರೆ. ಸಂಗೀತಾಸಕ್ತರು ಉಚಿತವಾಗಿ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಎಂದು ನಾರಾಯಣ ಐತಾಳ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8762436950ನ್ನು ಸಂರ್ಕಿಸಲು ಕೋರಿದೆ.


Aware others:

Leave a Reply

Your email address will not be published. Required fields are marked *

error: Content is protected !!