ಮಹಿಳಾ ಸಶಕ್ತತೆಗೆ ಸಾವಿತ್ತಿಬಾಯಿ ಪುಲೆ ಕೊಡುಗೆ ಅಪಾರ – ಅಶೋಕ ಪೂಜಾರಿ ಬೀಜಾಡಿ
ಕುಂದಾಪುರ: ಮಹಿಳೆಯರು ಸಶಕ್ತರಾಗಲು ಸಾವಿತ್ರಿಬಾಯಿ ಪುಲೆ ಅವರ ಆದರ್ಶಗಳು ದಾರಿದೀಪವಾಗಿವೆ. ಭಾರತದ ಗೌರವಾನ್ವಿತ ದಿಟ್ಟ ಮಹಿಳೆ ಸಾವಿತ್ರಿಬಾಯಿ ಪುಲೆ ಅವರ ಜೀವನ ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ಉಡುಪಿ ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಹೇಳಿದರು.

ಅವರು ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ವಾದ ತಾಲೂಕು ಸಮಿತಿ ಹಾಗೂ ತಾಲೂಕು ಮಹಿಳಾ ಒಕ್ಕೂಟ ವತಿಯಿಂದ ಕೋಟೇಶ್ವರದ ದೇವರಾಜ ಅರಸು ಹಿಂದುಳಿದ ಮೆಟ್ರಿಕ್ ನಂತರದ ಪದವಿ ಪೂರ್ವ ವಿದ್ಯಾರ್ಥಿನಿಲಯದಲ್ಲಿ ನಡೆಸಲಾದ ಅಕ್ಷರ ಮಾತೆ ಸಾವಿತ್ರಿ ಬಾಯಿಪುಲೆ 195ನೇ ಜನ್ಮಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪ್ರದಾನ ಸಂಚಾಲಕ, ವಕೀಲ ಟಿ ಮಂಜುನಾಥ ಗಿಳಿಯಾರು ಮಾತನಾಡಿ, ಅವಿದ್ಯಾವಂತರಾಗಿದ್ದ ಸಾವಿತ್ರಿಬಾಯಿ ಪುಲೆ 1891ರಲ್ಲಿ ಜನಿಸಿ ಬಾಲ್ಯದಲ್ಲೇ ಜೋತಿಬಾಯಿ ಪುಲೆಯರೊಂದಿಗೆ ಬಾಲ್ಯ ವಿವಾಹವಾದ ಬಳಿಕ ಮನೆಯಲ್ಲಿ ಶಿಕ್ಷಣ ನೀಡುತ್ತಾರೆ. ಬಳಿಕ ಶಾಲೆ ಪ್ರಾರಂಭಿಸಿದರು. ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆಯರಿಗೆ ವಿದ್ಯಬ್ಯಾಸಕ್ಕೆ ಅವಕಾಶ ಕಲ್ಪಿಸುವಲ್ಲಿ ಅವಮಾನಗಳನ್ನು ಸಹಿಸಿಕೊಂಡು ಕಷ್ಟ ನಷ್ಟಗಳನ್ನು ಅನುಭವಿಸಿದರೂ ಮಹಿಳೆಯರಿಗೆ ಶಾಲೆ ತೆರೆದ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂದು ಗುರುತಿಸಲ್ಪಟ್ಟರು ಎಂದರು.

ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಲತಾ ಎಸ್ ಶೆಟ್ಟಿ ಮಾತನಾಡಿ, ಸಾವಿತ್ರಿಬಾಯಿ ಪುಲೆ ಕೇವಲ ಹೆಣ್ಣಾಗಿ ಉಳಿಯದೆ ಭಾರತದ ಮಹಿಳೆಯರಿಗೆ ವಿದ್ಯೆಯ ಪರಿಕಲ್ಪನೆ ನೀಡುವ ಮೂಲಕ ಪ್ರತಿಯೊಬ್ಬ ಮಹಿಳೆಯರು ಸಮಾಜದಲ್ಲಿ ಗೌರವಾನ್ವಿತ ಸ್ವಾಭಿಮಾನಿ ಜೀವನವನ್ನು ಬಾಳುವಂತೆ ಪ್ರೇರಣೆಯಾಗಿದ್ದಾರೆ ಎಂದರು.
ತಾಲೂಕು ಪ್ರದಾನ ಸಂಚಾಲಕ ಪ್ರಸ್ತಾವಿಸಿದರು. ವಿದ್ಯಾರ್ಥಿ ನಿಲಯ ಪಾಲಕಿ ಆಶಲತಾ ವಂದಿಸಿದರು. ಚೈತ್ರ ಸತೀಶ್ ನಿರೂಪಿಸಿದರು. ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಕಿ ಗೀತಾ ಸುರೇಶ್, ಕುಂದಾಪುರ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಪುಷ್ಪ, ಕುಂದಾಪುರ ತಾಲೂಕು ಮುಖ್ಯ ವಿದ್ಯಾರ್ಥಿನಿಲಯ ಪಾಲಕಿ ಆಶಾ ದೇವಿ, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಬಾರ್ಕೂರ್, ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮ್ ಸುಂದರ್ ತೆಕ್ಕಟ್ಟೆ, ಸಂಘಟನ ಸಂಚಾಲಕ ವಿಜಯ ಗಿಳಿಯಾರು, ಕುಂದಾಪುರ ತಾಲೂಕು ಸಂಘಟನ ಸಂಚಾಲಕರುಗಳಾದ ಚಂದ್ರ ಊಳ್ಳೂರು, ಅಶೋಕ ಮೊಳಹಳ್ಳಿ, ಮಹೇಶ್ ಗಂಗೊಳ್ಳಿ, ಗೋಪಾಲ ಗಿಳಿಯಾರು ಮೊದಲಾದವರು ಉಪಸ್ಥಿತರಿದ್ದರು.
