ಪೆರ್ಡೂರು ಮೇಳದವರಿಂದ ಎರಡನೇ ಹೊಸ ಕಥಾ ಪ್ರಸಂಗ ಪ್ರಳಯ ಪಂಚಾಗ್ನಿ ಬಿಡುಗಡೆ ಪ್ರದರ್ಶನ
ಪ್ರಸಂಗಕರ್ತೆ ಶಾಂತಾ ವಾಸುದೇವ ಆನಗಳ್ಳಿ, ಬೀಜಾಡಿ ಅಶೋಕ್ ಪೂಜಾರಿ ಸಹಿತ ಹಲವರಿಗೆ ಸನ್ಮಾನ
ಕುಂದಾಪುರ: ಇತ್ತಿಚಿನ ದಿನಗಳಲ್ಲಿ ಯಕ್ಷಗಾನಗಳು ಸಿನೀಮೀಯ ದೃಶ್ಯಗಳ ಮೂಲಕ ಮೂಲ ನಿಯಮಗಳನ್ನು ಮೀರುತ್ತಿರುವುದು ವಿಷಾಧನೀಯ. ಹೊಸ ಪ್ರಸಂಗಕರ್ತರು ಭವಿಷ್ಯದಲ್ಲಿ ಇಂತಹಾ ನ್ಯೂನ್ಯತೆಗಳನ್ನು ಸರಿಪಡಿಸುವ ಜವಾಬ್ಧಾರಿ ಹೊಂದಿದಾಗ ಯಕ್ಷಗಾನ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಯಕ್ಷಪ್ರೇಮಿ ಡಾ. ಆದರ್ಶ ಹೆಬ್ಬಾರ್ ಹೇಳಿದರು.
ಅವರು ಶನಿವಾರ ಸಂಜೆ ಕುಂದಾಪುರದ ನೆಹರೂ ಮೈದಾನದಲ್ಲಿ ಜನನಿ ಸೈನ್ಸ್ ಎನ್ ಚಂದ್ರ ಕಾಂಚನ್ ಕೊಂಡಳ್ಳಿ, ಶಾಂತವಾಸುದೇವ ಪೂಜಾರಿ ಅಭಿಮಾನಿ ಬಳಗ, ಕುಂದಾಪುರ ಮತ್ತು ಗಣೇಶ್ ಗುನಗ ಸ್ಪರ್ಣನೂಪುರ ಹಾಗೂ ಸ್ನೇಹಿತರ ಸಂಯೋಜನೆಯಲ್ಲಿ ಹಮ್ಮಿಕೊಳ್ಳಲಾದ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ, ಪೆರ್ಡೂರು ಮೇಳದವರಿಂದ ಈ ವರ್ಷದ ಎರಡನೇಯ ಪ್ರಸಂಗ ಪ್ರಳಯ ಪಂಚಾಗ್ನಿ ಬಿಡುಗಡೆ ಮ್ತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.





ಇದೇ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ್ ಪೂಜಾರಿ ಬೀಜಾಡಿ, ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆಶಾಂತಾ ವಾಸುದೇವ ಪೂಜಾರಿ ಅವರು ಪ್ರಸಂಗ ನೀಡುವ ಮೂಲಕ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಯಕ್ಷಗಾನದ ಉಳಿವಿಗೆ ನಾವೆಲ್ಲರೂ ಪ್ರಯತ್ನಿಸಬೇಕು ಎಂದರು.






ಕೃಷಿ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೋಡಿ ಗಂಗಾಧರ ಪೂಜಾರಿ, ರಂಗಭೂಮಿಯಲ್ಲಿ ಸಾಧನೆ ಮಾಡಿದ ಅಶೋಕ್ ದೇವಾಡಿಗ ಆನಗಳ್ಳಿಯವರನ್ನು ಗುರುತಿಸಿ ಸನ್ಮಾನಿಸಲಾಯಿತು. ಹವ್ಯಾಸಿ ಕಲಾವಿದ ಛಾಯಾಗ್ರಾಹಕ ಅಕ್ಷಯ್ ಕೋಟೇಶ್ವರ, ಯಕ್ಷಗಾನದ ಧ್ವನಿ ಪ್ರಚಾರಕರಾಗಿ ಕೊಡುಗೆ ನೀಡಿದ ಸುರೇಂದ್ರ ಸಂಗಂ ಅವರನ್ನು ಸಂತೋಷ್ ಪೂಜಾರಿ ಆನಗಳ್ಳಿಯವರು ಗೌರವಿಸಿದರು.







ಪ್ರಳಯ ಪಂಚಾಗ್ನಿ ಯಕ್ಷಗಾನ ಪ್ರಸಂಗಕರ್ತೆ ಶಾಂತಾ ವಾಸುದೇವ ಆನಗಳ್ಳಿಯವರನ್ನು ಗೋಪಾಲ ಪೂಜಾರಿ ಅವರು ಸನ್ಮಾನಿಸಿದರು. ಪ್ರಳಯ ಪಂಚಾಗ್ನಿ ಪ್ರಸಂಗವನ್ನು ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರು ಉದ್ಘಾಟಿಸಿದರು. ಶಾಂತಾ ವಾಸುದೇವ ಕೃತಿ ಹಸ್ತಾಂತರಿಸಿದರು. ಶಿಕ್ಷಕ ಅಬ್ದುಲ್ ರವೂಫ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಳಯ ಪಂಚಾಗ್ನಿ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
