ಕೋಟ: ಇಂಡಿಕಾ ಪುರಸ್ಕಾರಕ್ಕೆ, ಯಕ್ಷತೀರ್ಥ ತೀರ್ಥಹಳ್ಳಿ ಗೋಪಾಲ ಆಚಾರ್ ಆಯ್ಕೆ
ಕುಂದಾಪುರ: ಕೋಟ ಮಣೂರು ಪಡುಕರೆಯ ಇಂಡಿಕಾ ಕಲಾ ಬಳಗ ಪ್ರತಿ ವರ್ಷ ನೀಡುವ ಮೊಳಹಳ್ಳಿ ಹೆರಿಯ ನಾಯ್ಕ ಇಂಡಿಕಾ ಪುರಸ್ಕಾರಕ್ಕೆ, ಹಿರಿಯ ಯಕ್ಷಗಾನ ಕಲಾವಿದ ಯಕ್ಷತೀರ್ಥ ತೀರ್ಥಹಳ್ಳಿ ಗೋಪಾಲ ಆಚಾರ್ ಆಯ್ಕೆಯಾಗಿದ್ದಾರೆ ೆಂದು ಪ್ರಕರಟಣೆ ತಿಳಿಸಿದೆ.

ಫೆ. 8 ರಂದು ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲಾ ವಠಾರದ ಗೀತಾನಂದ ರಂಗಮಂಟಪದಲ್ಲಿ ನಡೆಯುವ ಇಂಡಿಕಾ 16ನೇ ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಜೊತೆಗೆ ಪ್ರತಿಭಾ ಪುರಸ್ಕಾರ, ವಿಶೇಷ ಅಭಿನಂದನೆ, ಅಶಕ್ತರಿಗೆ ನೆರವು ನೀಡುವ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಇದೇ ಸಂದರ್ಭ ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ಮಕ್ಕಳ ನೃತ್ಯ ವೈವಿಧ್ಯ, ಪಿಂಗಾರ ಕಲಾವಿದರು ಬೆದ್ರ ಮಂಗಳೂರು ಇವರಿಂದ ಓಂಕಾರ ನಾಟಕ ಪ್ರದರ್ಶನಗೊಳ್ಳಲಿದೆ. ಎಂದು ಇಂಡಿಕಾ ಕಲಾಬಳಗದ ಸಂಚಾಲಕ ಪ್ರಭಾಕರ್ ಪಡುಕರೆ, ಅಧ್ಯಕ್ಷ ಎಂ.ಜಯರಾಮ ಶೆಟ್ಟಿ , ಸಮಿತಿಯ ಪ್ರಮುಖರಾದ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
