ಕೋಟ: ಬಿಜೆಪಿ ವಂಚನೆಗೆ ಕಾಂಗ್ರೆಸ್ ಮೇಲೆ ಆರೋಪ! ಪ್ರಮೋದ್ ಮಧ್ವರಾಜ್ ಹೇಳಿಕೆಗೆ ನಾಗೇಂದ್ರ ಪುತ್ರನ್ ಕಿಡಿ
ಕೋಟ: ಮಾಜೀ ಸಚಿವ ಪ್ರಮೋದ್ ಮಧ್ವರಾಜ್ ಪತ್ರಿಕಾಗೋಷ್ಟಿಯಲ್ಲಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯನವರ ವಿರುದ್ಧ ನೀಡಿರುವ ಹೇಳಿಕೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಆಕ್ರೋಶ ಹೊರಹಾಕಿದ್ದಾರೆ.

ತನಗೆ ಬಿಜೆಪಿ ಮೋಸ ಮಾಡಿದೆ ಎನ್ನುವದರ ಅರಿವಿದ್ದೂ ನಾಚಿಕೆ ಬಿಟ್ಟು ಸಮರ್ಥಿಸಿಕೊಂಡಿದ್ದಲ್ಲದೇ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ಮಾತನಾಡಿರುವ ಪ್ರಮೋದ್ ಮಧ್ವರಾಜ್ ಗೆ ಆತ್ಮಸಾಕ್ಷಿಯೇ ಇಲ್ಲ ಎಂದು ನಾಗೇಂದ್ರ ಪುತ್ರನ್ ಲೇವಡಿ ಮಾಡಿದ್ದಾರೆ. ಮಧ್ವರಾಜ್ ಪತ್ರಿಕಾಗೋಷ್ಟಿಯುದ್ದಕ್ಕೂ ತನಗೆ ಅನ್ಯಾಯವಾಗಿದೆ. ಅದು ಬಿಜೆಪಿಯಿಂದಲೇ ಆಗಿದೆ ಎನ್ನುವ ಪರೋಕ್ಷ ಹೇಳಿಕೆ ನೀಡುತ್ತಾ, ಸಿದ್ಧರಾಮಯ್ಯನವರು ಕರೆದರೂ ಬರಲಿಲ್ಲ. ಹಾಗಾಗಿ ಮೋದಿ ಮತ್ತು ಬಿಜೆಪಿ ಮಾಡಿದ್ದು ಸರಿ ಎನ್ನುವ ಸಮರ್ಥನೆ ಮಾಡಿಕೊಂಡಿರುವುದು ಇಡೀ ಜಿಲ್ಲೆಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಮಧ್ವರಾಜರಿಗೆ ಸಾಕಷ್ಟು ಅವಕಾಶಗಳನ್ನೂ ಅಧಿಕಾರವನ್ನೂ ನೀಡಿದೆ ಎನ್ನುವುದನ್ನು ಸ್ವತಃ ಮಧ್ವರಾಜ್ ಅವರೇ ಮರೆತಿದ್ದಾರೆ. ಜಿಲ್ಲಾ ಬಿಜೆಪಿ ಕಳಿಸಿದ ಪಟ್ಟಿಯಲ್ಲಿ ಪ್ರಮೋದ್ ಮಧ್ವರಾಜ್ ಹೆಸರಿತ್ತು, ಮಠದ ವತಿಯಿಂದ ಕಳಿಸಿದ್ದ ಪಟ್ಟಿಯಲ್ಲಿಯೂ ಪ್ರಮೋದ್ ಮಧ್ವರಾಜ್ ಹೆಸರಿತ್ತು. ಆದರೆ ಮೋದಿ ಕಾರ್ಯಕ್ರಮದಲ್ಲಿ ಎರಡೂ ಪಟ್ಟಿಯಲ್ಲಿದ್ದ ಪ್ರಮೋದ್ ಮಧ್ವರಾಜ್ ಹೆಸರನ್ನು ಮೋದಿಯವರೇ ಕೈಬಿಟ್ಟರು ಎನ್ನುವುದು ಸ್ಪಷ್ಟವಾಗಿದೆ.
ಕಾಂಗ್ರೆಸ್ ಬಿಟ್ಟ ಮಧ್ವರಾಜ್ ಬಿಜೆಪಿ ಸೇರಿ ಬಾಲಸುಟ್ಟ ಬೆಕ್ಕಿನಂತಾಗಿದ್ದಾರೆ. ಲೋಕಸಭಾ ಸದಸ್ಯನಾಗುವ ಆಸೆಗೆ ಬಿಜೆಪಿ ಸೇರಿದ್ದ ಪ್ರಮೋದ್ ಮಧ್ವರಾಜ್ ರನ್ನು ಕಾಂಗ್ರೆಸ್ ಮಮೂಲೆಗುಂಪು ಮಾಡಿಲ್ಲ ಎನ್ನುವುದನ್ನು ಪ್ರಮೋದು ಮರೆಯಬಾರದು ಎಂದು ವ್ಯಂಗ್ಯವಾಡಿದ ಅವರು, ಮಧ್ವರಾಜ್ ಕಾಂಗ್ರೆಸ್ ನಲ್ಲಿದ್ದಾಗ ಮೋದಿ ಬಗ್ಗೆ ಮಾತನಾಡುತ್ತಾ, ಮೋದಿ ಅಂದರೆ ಮೋಸ; ನಮೋ ಎಂದರೆ ನಮಗೆ ಮೋಸ ಎಂದಿದ್ದನ್ನೂ ನೋಡಿದ್ದೇವೆ. ಬಹುಃಷ ಮೋದಿಯವರು ಅದನ್ನು ುಡುಪಿ ಭೆಟಿ ಸಂದರ್ಭ ಪ್ರಮೋದ್ ಮಧ್ವರಾಜ್ ಅವರಿಗೆ ನೆನಪಿಸಿದರೇ? ಎಂದು ಕೇಳಿದ್ದಾರೆ.
ಕುರುಬ, ಹಾಲುಮತ ಸಮಾಜ ದಿಂದ ಬಂದವರು ಸಿದ್ದರಾಮಯ್ಯ, ದಾಸರ, ಶರಣರ ಬಗ್ಗೆ ಅಗಾಧ ಜ್ಞಾನ ಮತ್ತು ಗೌರವ ಉಳ್ಳವರು, ಪ್ರಮೋದ್ ಮದ್ವರಾಜರ ಗೊಡ್ಡು ರಾಜಕೀಯಕ್ಕೋಸ್ಕರ ಸಿದ್ದರಾಮಯ್ಯ ಹೆಸರು ಹೇಳಿ ಕೊಂಡು ಮೊನ್ನೆ ತಮಗೆ ಆಗಿರುವ ನಯವಂಚನೆ ಶಮನಕ್ಕೆ ಕಾಂಗ್ರೆಸ್ ನಾಯಕರ ಹೆಸರು ಪ್ರಸ್ತಾಪ ಮಾಡಬೇಡಿ. ಸಿದ್ದರಾಮಯ್ಯ ಅವರನ್ನು ದೂರುವ ಮೊದಲು, ಇತ್ತೀಚಿಗೆ ನಿಮ್ಮ ಹೆಸರಿನಲ್ಲಿ ಮುದ್ರಣ ಆಗುವ ಆಮಂತ್ರಣ ಪತ್ರಿಕೆಯ ನಿಮ್ಮ ಹೆಸರಿನ ಹಿಂದೆ ಮಾಜಿ ಸಚಿವ ಇದೆ ಅದು ಕಾಂಗ್ರೆಸ್ ಸಿದ್ದರಾಮಯ್ಯ ಕೊಟ್ಟ ಉಡುಪಿ ಶ್ರೀ ಕ್ರಷ್ಣನ ಕ್ಷೇತ್ರದ ನಾಡಿಗೆ ಕೊಟ್ಟಿರುವ ಗೌರವ ಅನ್ನೋದು ಮರೀಬೇಡಿ ಎಂದು ಎಚ್ಚರಿಸಿದ್ದಾರೆ.
ಮೋದಿ ಭೇಟಿ ಸಂದರ್ಭ ವೇದಿಕೆಯಲ್ಲಿ, ಕನಕನ ಕಿಂಡಿಯ ಉದ್ಘಾಟನೆಯಲ್ಲಿ ನಿಮ್ಮ ಹೆಸರು ಇಲ್ಲದೇ ಇರಲು ಕಾರಣ ನಿಮ್ಮ ಕ್ಷೇತ್ರದ ಶಾಸಕರು. ತಾಕತ್ತಿದ್ದರೆ ಮೋದಿ ಭೆಟಿ ಸಂದರ್ಭ ನಿಮಗೆ ಅವಕಾಶ ವಂಚನೆ ಮಾಡಿದವರ ವಿರುದ್ಧ ತೋರಿಸಿ. ಬದಲಾಗಿ ನಿಮಗೆ ಅವಕಾಶಕೊಟ್ಟು ಸಚಿವರನ್ನಾಗಿ ಮಾಡಿದವರ ವಿರುದ್ಧ ನಿಮ್ಮ ಹರಕು ನಾಲಗೆ ಹರಿಬಿಡಬೇಡಿ ಎಂದು ಎಚ್ಚರಿಸಿದ್ದಾರೆ.
