BlogCulturalEducationEntertainmentFashionHighlightsHuman storiesLifestyleLocal newsOthersTop StoriesTrending

ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ರಂಗೇಳಿಸಿದ ದೇವಿ ಮಹಾತ್ಮೆ ಬೆಳಕಿನ ಸೇವೆಯಾಟ

Aware others:

ಪುರಪ್ರವೇಶ ಮಾಡಿದ ಮಹಿಷಾಸುರ, ಅಭಯ ನೀಡಿದ ಶ್ರೀ ದೇವಿ

ಕುಂದಾಪುರ: ಇಂದು ಶಿಕ್ಷಣ ಕ್ಷೇತ್ರವೆಂದರೆ ಅಂಕಗಳಿಕೆಯ ಪ್ರಯೋಗಶಾಲೆಯಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣದ ಜೊತೆಗೆ ನೈತಿಕ, ಮೌಲಿಕ, ಧಾರ್ಮಿಕ ಶಿಕ್ಷಣಗಳನ್ನೂ ನೀಡುತ್ತಾ, ಪಠ್ಯೇತರ ಚಟುವಟಿಕೆಗಳಲ್ಲಿ ಪುಟ್ಟ ಮನಸ್ಸುಗಳನ್ನು ಉತ್ತೇಜಿಸುವಲ್ಲಿ ಕುಂದಾಪುರ ತಾಲೂಕಿನ ಹಲವು ಶಿಕ್ಷಣ ಸಂಸ್ಥೆಗಳು ತಮ್ಮದೇ ಕೊಡುಗೆ ನೀಡುತ್ತಿವೆ. ಆ ಪೈಕಿ ಯಡಾಡಿ ಮತ್ಯಾಡಿ ಗ್ರಾಮದಲ್ಲಿರುವ ವಿದ್ಯಾರಣ್ಯ ಕ್ಯಾಂಪಸ್ ಕೂಡಾ ಒಂದು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನಡೆಸುತ್ತಿರುವ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಕೇವಲ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರವಲ್ಲದೇ ರಾಜ್ಯ ಹೊರರಾಜ್ಯದ ವಿದ್ಯಾರ್ಥಿಗಳೂ ಶಿಕ್ಷಣಾರ್ಥಿಗಳಾಗಿ ಬರುತ್ತಿದ್ದು, ವಸತಿ ಸಹಿತ ಶಿಕ್ಷಣ ನೀಡಲಾಗುತ್ತಿದೆ. ಅದೇ ಕಾರಣಕ್ಕಾ ವಿದ್ಯಾರಣ್ಯ ಕ್ಯಾಂಪಸ್ ಒಂದು ವಿಭಿನ್ನ ಶಿಕ್ಷಣ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ.

ಹಾಸ್ಟೆಲ್ ನಲ್ಲಿ ಓದುವ ಮಕ್ಕಳಿಗೆ ಸಾಮಾನ್ಯವಾಗಿ ಸಂಸ್ಕೃತಿ, ಸಂಪ್ರದಾಯಗಳು, ಕಲೆ, ಇತ್ಯಾದಿಗಳನ್ನು ಒದಗಿಸಿಕೊಡುವುದು ಆದ್ಯ ಕರ್ತವ್ಯವೂ ಆಗಿದೆ. ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಕರಾವಳಿಯ ಕಲಾ ಪ್ರಾಕಾರಗಳನ್ನು ಪರಿಚಯಿಸುವುದು ಕೂಡಾ ಕರಾವಳಿಯ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಜವಾಬ್ಧಾರಿಯೂ ಹೌದು. ಆ ನಿಟ್ಟಿನಲ್ಲಿ ಗುರುವಾರ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಕಟೀಲು ಶ್ರೀ ದುರ್ಗಾಪರಮೆಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೆಯಿತು.

ಅರ್ಧ ಕಿಲೋಮೀಟರ್ ದೂರದಿಂದ ಅದ್ಧೂರಿ ಮೆರವಣಿಗೆಯಲ್ಲಿ ಸಾಗಿ ಪುರಪ್ರವೇಶ ಮಾಡಿದ ಮಹಿಷಾಸುರ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕಲಾ ಪ್ರಾಕಾರಗಳನ್ನು ಪರಿಚಯಿಸುವುದು ನಮ್ಮ ಉದ್ದೇಶ. ಜೊತೆಗೆ ನಮ್ಮ ವಿದ್ಯಾರ್ಥಿಗಳಿಗೂ ಶ್ರೀ ದೇವಿಯ ಆಶೀರ್ವಾದ ದೊರೆಯುತ್ತದೆ ಎನ್ನುವ ನಂಬಿಕೆಯಿಮದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಶಿಕ್ಷಣದ ಜೊತೆಗೆ ಕಲಾ ಪ್ರಾಕಾರಗಳ ವಿನಿಯವೂ ನಮ್ಮ ವಿದ್ಯಾರ್ಥಿಗಳಿಗೆ ಆಗಬೇಕು. ಉತ್ತರ ಕರ್ನಾಟಕದ ದೊಡ್ಡಾಟಗಳು, ಸಣ್ಣಾಟಗಳು ಕರಾವಳಿಯ ಮಕ್ಕಳಿಗೆ ಪರಿಚಯವಾದರೆ, ಕರಾವಳಿಯ ಗಂಡುಕಲೆ ಯಕ್ಷಗಾನದ ಪರಿಚಯ ುತ್ತರ ಕರ್ನಾಟಕದ ವಿದ್ಯಾರ್ಥಿಗಳಿ ಸಿಗಬೇಕು ಎನ್ನುವ ಉದ್ಧೇಶ ನಮ್ಮದು ಎಂದರು.  ಒಟ್ಟಾರೆಯಾಗಿ ಯಕ್ಷಗಾನದ ಪ್ರದರ್ಶನದಿಂದ ವಿದ್ಯಾರ್ಥಿಗಳು ಪುಳಕಿತರಾಗಿದ್ದಂತೂ ಸತ್ಯ.


Aware others:

Leave a Reply

Your email address will not be published. Required fields are marked *

error: Content is protected !!