ಶಿಕ್ಷಣದೊಂದಿಗೆ ಕಲಾ ಪ್ರತಿಭೆಗಳಿಗೆ ಪ್ರತಿಭಾಕಾರಂಜಿ ಉತ್ತಮ ಅವಕಾಶ – ಬಿ.ಎಸ್.ಸುರೇಶ್ ಶೆಟ್ಟಿ
ಸರಸ್ವತಿ ವಿದ್ಯಾಲಯದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಉದ್ಘಾಟನೆ
ಸಿದ್ದಾಪುರ: ಕೇವಲ ಪರೀಕ್ಷಾ ಅಂಕಗಳಿಗೆ ಒತ್ತುಕೊಡದೇ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡುವ ಪ್ರತಿಭಾಕಾರಂಜಿಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಎಂದು ಸುಮುಖ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಹೇಳಿದರು.

ಅವರು ಕುಂದಾಪುರ ತಾಲೂಕಿನ ಸಿದ್ಧಾಪುರದ ಸರಸ್ವತಿ ವಿದ್ಯಾಲಯದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.





ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಸುಪ್ತವಾಗಿರುವ ಪ್ರತಿಭೆಯಿರುತ್ತದೆ. ಪ್ರತಿಭಾಕಾರಂಜಿಯಂತಹಾ ಕಾರ್ಯಕ್ರಮಗಳಲ್ಲಿ ತೀರ್ಪುಗಾರರು ಪಕ್ಷಪಾತಕ್ಕೊಳಗಾಗದೇ ಮೌಲ್ಯಯುತ ತೀರ್ಪು ನೀಡುವ ಮೂಲಕ ನೈಜ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಾಗ ಕಾರ್ಯಕ್ರಮಗಳು ಸಾರ್ಥಕ್ಯ ಪಡೆಯುತ್ತವೆ ಎಂದರು.









ಸಿದ್ಧಾಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೃಷ್ಣಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮುಖ ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟೀ ಪಾಂಡುರಂಗ ಪಡಿಯಾರ್, ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಕಾಂಚನ್, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಶಂಕರ್, ಮಿಲ್ಟನ್ ಕ್ರಾಸ್ತಾ, ಸಿ.ಆರ್.ಪಿ.ಗಳಾದ ಪ್ರಭಾಕರ ಹಾಗೂ ರಾಮ, ಜ್ಞಾನಸರಸ್ವತಿ ಪಿಯು ಕಾಲೇಜಿನ ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಭಂಡಾರಿ, ಚಂದ್ರಕುಲಾಲ್, ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಸಿದ್ಧಾಪುರ ಇದರ ಮುಖ್ಯೋಪಾದ್ಯಾಯ ಸೋಮನಾಯ್ಕ ಉಪಸ್ಥಿತರಿದ್ಧರು.









ಸರಸ್ವತಿ ವಿದ್ಯಾಲಯದ ಮುಖ್ಯೋಪಾದ್ಯಾಯಿನಿ ಶ್ವೇತಾ ಗಣೇಶ್ ಸ್ಬಾಗತಿಸಿದರು. ಕನ್ನಡ ಶಿಕ್ಷಕಿ ಪೂರ್ಣಿಮಾ, ಶಿಕ್ಷಕಿ ರಮ್ಯಾ ಆರ್ ಭಟ್ ವಂದಿಸಿದರು. ಶಿಕ್ಷಕಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
