ಕೋಟ: ಮೆಸ್ಕಾಂನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಕುಂದಾಪುರ: ಕೋಟ ಉಪವಿಭಾಗ ಪ್ರಾಥಮಿಕ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವನ್ನು ಕೋಟ ಶಾಖಾಕಛೇರಿ ಯಲ್ಲಿ ಕನ್ನಡ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ ಶೆಟ್ಟಿ ಮಾತನಾಡಿ, ಕನ್ನಡ ಭಾಷೆಯನ್ನು ಮಕ್ಕಳಿಗೆ ಮನೆಯಲ್ಲಿ ಮಾತನಾಡುವ ಮೂಲಕ ಕನ್ನಡದ ಭಾಷೆಯನ್ನು ಉಳಿಸಬೇಕಾದಂತ ಕರ್ತವ್ಯ ತಂದೆ ತಾಯಿದಾಗಿದೆ ಎಂದು ಹೇಳಿದರು.
ಮೆಸ್ಕಾಂ ನೌಕರರು ಕನ್ನಡ ರಾಜ್ಯೋತ್ಸವದ ಹಾಡುಗಳನ್ನು ಹಾಡಿದರು. ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ, ಕಾರ್ಯದರ್ಶಿ ಸುಕುಮಾರ ಶೆಟ್ಟಿ, ಸಾಸ್ತಾನ ಶಾಖಾಧಿಕಾರಿ ಮಹೇಶ ಕೆ,ಮೇಲ್ವಿಚಾರಕ ಚಂದ್ರಶೇಖರ, ಪ್ರಾಥಮಿಕ ಸಮಿತಿ ಸದಸ್ಯರು ಹಾಗೂ ನೌಕರರು ಗುತ್ತಿಗೆದಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
