BlogCulturalEconomyEducationEntertainmentFashionHighlightsHuman storiesLifestyleLocal newsOthersSuccess storiesTop StoriesTrending

ಬ್ರಹ್ಮಾವರ: ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಶತಮಾನೋತ್ತರ ದಶಮಾನೋತ್ಸವ – ಉನ್ನತಿ ವೈಭವ ಸಂಪನ್ನ

Aware others:

ಬ್ರಹ್ಮಾವರ: ನೂರಾ ಹತ್ತು ವರ್ಷಗಳ ಯಶಸ್ವೀ ಸಾಧನೆಯೊಂದಿಗೆ ಮುನ್ನಡೆಯುತ್ತಿರುವ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘವು ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮ ಆಚರಿಸಿಕೊಳ್ಳುತ್ತಿರುವುದು ಸಹಕಾರಿ ಕ್ಷೇತ್ರಕ್ಕೇ ಮಾದರಿಯಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದರು. ಅವರು ಭಾನುವಾರ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಶತಮಾನೋತ್ತರ ದಶಮಾನೋತ್ಸವದ ಅಂಗವಾಗಿ ಬ್ರಹ್ಮಾವರ ರುಡ್‌ಸೆಟ್ ಹತ್ತಿರದ ದೇವಕಿ ಕನ್ವೆನ್ಷನ್ ಸೆಂಟರ್ ಉನ್ನತಿ ವೈಭವ 2025 ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಸಿದ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ, 110 ವರ್ಷಗಳ ಕಾಲ ಯಶಸ್ವಿಯಾಗಿ ಈ ಸಂಸ್ಥೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಡೆದು ಬಂದಿದೆ. ಆ ಪ್ರಯುಕ್ತ ಮಕ್ಕಳಿಗೆ ರಾಷ್ಟ್ರದ ಮೇಲಿನ ಭಕ್ತಿ ಮೂಡಿಸುವ ಕೆಲಸ ಮಾಡುವ ಉದ್ದೇಶದಲ್ಲಿ, ಸಂಸ್ಥೆಯ ಅಭಿವೃದ್ಧಿಗೆ ಕಾರಣರಾದವರಿಗೆ ಕೃತಜ್ಞತೆ ಹಾಗೂ ಗೌರವ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ 7 ಲಕ್ಷ ರೂ ವಿದ್ಯಾರ್ಥಿ ವೇತನ ನೀಡಿದೆ. ಸಹಕಾರಿ ಸಂಸ್ಥೆ ಮನೆಕಟ್ಟಲು, ಅನಾರೋಗ್ಯಕ್ಕೊಳಗಾದವರ ಚಿಕಿತ್ಸೆಗೆ, ಮದುವೆಗೆ, ಇನ್ನಿತರ ಆರ್ಥಿಕ ಬೇಡಿಕೆಗೆ ತುರ್ತು ಸೇವೆ ನೀಡುತ್ತಾ ಬಂದಿದೆ . 1000 ಕೋಟಿ ವ್ಯವಹಾರ ಮಾಡುತ್ತಿದ್ದು 5 ಕೋಟಿಗೂ ಮಿಕ್ಕಿ ಲಾಭವನ್ನು ಪ್ರತಿ ವರ್ಷ ಗಳಿಸುತ್ತಾ ಬಂದಿದೆ. ದಿ.ಇರ್ಮಾಡಿ ತಿಮ್ಮಪ್ಪ ಹೆಗ್ಡೆಯವರು ಹಾಗೂ ಮಾಜಿ ಅಧ್ಯಕ್ಷ ವೆಂಕಟ್ರಾಯ ನಾಯಕ್ ಜೋಡೆತ್ತಿನ ರೀತಿಯಲ್ಲಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು ಎಂದರು.

ಸಂಘದ ಹಿರಿಯ ನಿರ್ದೇಶಕ ಜ್ಞಾನ ವಸಂತ ಶೆಟ್ಟಿ ಮಾತನಾಡಿ, 35 ವರ್ಷಗಳ ಕಾಲ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿ ನಿಧನರಾಗಿರುವ ಇರ್ಮಾಡಿ ತಿಮ್ಮಪ್ಪ ಹೆಗ್ಡೆಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಕಟ್ಟಿ ಬೆಳೆಸಲು ಕಾರಣರಾಗಿದ್ದರು. ಅವರು ಎಲ್ಲರಿಗೂ ಪ್ರೇರಣೆಯಾಗಿದ್ದರು. ಅವರ ಸ್ಫೂರ್ತಿ, ಮಾರ್ಗದರ್ಶನ ಅಮೂಲ್ಯವಾದದ್ದು ಎಂದರು.

ಇದೇ ಸಂದರ್ಭ ಕೃಷಿಕರಾದ ಶಂಕರ ಪೂಜಾರಿ, ಭಾಸ್ಕರ ಶೆಟ್ಟಿ ಚೇರ್ಕಾಡಿ, ಕೃಷ್ಣ ಆರ್. ಶೆಟ್ಟಿ, ಪ್ರಭಾಕರ ನಾಯಕ್, ಐತ ಪೂಜಾರಿ, ಸುಕ್ರ ಪೂಜಾರಿ, ರಾಮ ಪೂಜಾರಿ ಹಾಗೂ ಹೈನುಗಾರರಾದ ಸರೋಜಿನಿ, ಸುಜಾತ ಆರೂರು, ಪ್ರಭಾವತಿ ಶೆಟ್ಟಿ ಅಗ್ರಹಾರ, ಗಿರಿಜಾ ಶೆಟ್ಟಿ, ಸುಲೋಚನ ಅಗ್ರಹಾರ, ದಿವ್ಯಾ ಅಲ್ಮೇಡ, ಲಕ್ಷ್ಮೀ ನಾಯ್ಕ್, ಪಿಗ್ಮಿ ಏಜೆಂಟರಾದ ಶಿವರಾಮ ಅಡಿಗ, ಸುಜಾತ ಶೆಟ್ಟಿ, ಚಿನ್ನ ಪರಿಶೀಲಿಸುವ ಪ್ರಕಾಶ್ ಆಚಾರ್ಯ ಹಾರಾಡಿ, ರಮೇಶ್ ಆಚಾರ್ಯ, ರವಿ ಆಚಾರ್ಯ ಕಾವಲುಗಾರರಾದ ರಾಜೇಂದ್ರ ಸೇರಿಗಾರ, ರಂಗ ದೇವಾಡಿಗ, ಪಾಂಡುರಂಗ, ಪ್ರಭಾಕರ ಶೆಟ್ಟಿಗಾರ್, ಸುರೇಶ್ ಪೂಜಾರಿ, ಜಯ ಕೋಟ್ಯಾನ್‌ರನ್ನು ಗೌರವಿಸಲಾಯಿತು.  ಸಂಘದ 11 ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ಕಲಾಸ್ಪರ್ಧೆ ಹಾಗೂ ವಿದ್ಯಾಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ಕಾರ್ಯಗಾರ ನಡೆಯಿತು. ಜಾನಪದ ಕಲಾಸ್ಪರ್ಧೆಯಲ್ಲಿ ಜಿ.ಎಮ್.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳಿಗೆ ಪ್ರಥಮ, ಎಸ್.ಎಮ್.ಎಸ್. ಸಿ.ಬಿ.ಎಸ್.ಸಿ. ಸ್ಕೂಲಿಗೆ ದ್ವಿತೀಯ ಬಹುಮಾನ ಹಾಗೂ ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ತೃತೀಯ ಬಹುಮಾನ ಪಡೆದುಕೊಂಡರು. 175 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಮಾಜಿ ಅಧ್ಯಕ್ಷ ಸುಂಕೇರಿ ವೆಂಕಟ್ರಾಯ ನಾಯಕ್ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ರಾಜೇಶ್ ಮರಕಾಲ, ಉಲ್ಲಾಸ್ ನಾಯಕ್, ನಾಗವೇಣಿ ಪಂಡರೀನಾಥ, ಎಸ್.ದಯಾನಂದ ನಾಯಕ್, ಶ್ರೀನಿವಾಸ ಶೆಟ್ಟಿ, ಸಂತೋಷ್  ಜತ್ತನ್, ಎಸ್.ನಾರಾಯಣ, ನಿತ್ಯಾನಂದ ನಾಯ್ಕ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಸ್ವಾಗತಿಸಿದರು. ಮ್ಯಾನೇಜರ್ ಪ್ರಕಾಶ್ ಸನ್ಮಾನಿತರ ವಿವರ ನೀಡಿದ್ದು ರಘುರಾಮ ಬೈಕಾಡಿ ಪ್ರಾರ್ಥಿಸಿದರು. ಸಿಬ್ಬಂದಿ ವಾಸುದೇವ ನಕ್ಷತ್ರಿ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ವಿವರ ನೀಡಿದರು. ಸಂಘದ ನಿರ್ದೇಶಕಿ ನಳಿನಿ ಪ್ರದೀಪ್ ರಾವ್ ವಂದಿಸಿದರು. ಆರ್.ಜೆ. ಪ್ರಸನ್ನ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು. ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಂಡಿತು.


Aware others:

Leave a Reply

Your email address will not be published. Required fields are marked *

error: Content is protected !!