ಕೋಟ: ಬ್ಲಾಕ್ ಕಾಂಗ್ರೆಸ್ ನಿಂದ ಸಾಮೂಹಿಕ ಗೋಪೂಜೆ

ಕೋಟ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿ ವರ್ಷದಂತೆ ಬುಧವಾರ ಕೋಟ ಬ್ಲಾಕ್ ಕಾಂಗ್ರೆಸ್ ನ ಹಿಂದುಳಿದ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಪೂಜಾರಿ ಗೋಳಿಬೆಟ್ಟು ಹಾಗೂ ಪ್ರೇಮ ಪೂಜಾರ್ತಿ ಗೋಳಿಬೆಟ್ಟು ಮಾತೃಕೃಪಾ ಮನೆಯಲ್ಲಿ ಸ್ಥಳೀಯ ಪುರೋಹಿತರಾದ ಕೃಷ್ಣ ಶರ್ಮರವರ ಸಮ್ಮುಖದಲ್ಲಿ “ಸಾಮೂಹಿಕ ಗೋ ಪೂಜೆ” ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ ಕುಂದರ್, ದೇವಲೋಕದ ಕಾಮಧೇನು ಸುರಭಿ, ಕಾಮಧೇನುವಿನ ಜಾತಿಯೆನಿಸಿದ ಗೋಜಾತಿಯಲ್ಲಿ ಬಂದ ಎಲ್ಲಾ ಗೋವುಗಳನ್ನೂ ಕಾಮಧೇನುವಿನ ಸನ್ನಿಧಾನದ ಅನುಸಂಧಾನದೊಡನೆ ‘ಸುರಭಿ’ ಎಂದೇ ಕರೆಯಲಾಗುತ್ತದೆ. ಸುರಭಿಯು ವಿಷ್ಣುದೇವನ ಪ್ರತೀಕ. ಆಕೆ ಎಲ್ಲರಿಗೂ ಹಾಲು ನೀಡುವ ತಾಯಿ, ಎಂದೆಂದಿಗೂ ವಿಷ್ಣುಪದದಲ್ಲಿ ನೆಲೆಗೊಂಡು ಮೂರು ಲೋಕಕ್ಕೂ ಮಾತೆಯಾಗಿ ಸರ್ವ ಪುಣ್ಯ ರಾಶಿಯನ್ನು ಹೊಂದಿದ ಪವಿತ್ರವಾದ ಸುರಭಿಯ ಮಕ್ಕಳಾದ ಗೋವುಗಳು ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ. ಗೋವುಗಳಿಗೆ ಸಾಧ್ಯವಾದಷ್ಟು ಪ್ರತ್ಯುಪಕರಿಸಬೇಕು. ಈ ಮೂಲಕ ಭೂತಋಣದಿಂದ ಮುಕ್ತನಾಗಬೇಕು. ಉಳ್ಳವನು ಗೋಮಾಳವನ್ನು ರಕ್ಷಿಸುತ್ತಾನೆ. ಗೋಶಾಲೆಯನ್ನು ನಿರ್ವಹಿಸಬಲ್ಲ. ಕೊನೇ ಪಕ್ಷ ವರ್ಷಕ್ಕೊಮ್ಮೆ ಬಲಿಪಾಡ್ಯದೊಂದು ಬರುವ ಈ ಪುಣ್ಯಕಾಲದಲ್ಲಿ ಗೋಪೂಜೆಯನ್ನು ಮಾಡಿ ಗೋಗ್ರಾಸವನ್ನು ಕೊಟ್ಟು ಗೋಮಾತೆಯ ಅನುಗ್ರಹವನ್ನು ಪಡೆಯೋಣ ಎಂದರು.

ಕೋಟ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ರೇಖಾ ಪಿ ಸುವರ್ಣ, ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ನಾಮ ನಿರ್ದೇಶಿತ ಸದಸ್ಯರಾದ ಬಸವ ಪೂಜಾರಿ ಗುಂಡ್ಮಿ, ಶೇಖರ್ ಪಿ ಮರಕಾಲ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಸಾಸ್ತಾನ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ರವಿ ಕಾಮತ್ ಗುಂಡ್ಮಿ, ಬ್ಲಾಕ್ ಕಾಂಗ್ರೆಸ್ ಕೋಟ ಹಿಂದುಳಿದ ಘಟಕದ ಅಧ್ಯಕ್ಷ ದಿನೇಶ್ ಬಂಗೇರ ಗುಂಡ್ಮಿ, ಲಕ್ಷ್ಮಿ ನರಸಿಂಹ ದೇವಸ್ಥಾನ ಅಣಲಾಡಿ ಮಠದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗೋಪಾಲ ಮಡಿವಾಳ ಐರೋಡಿ ಹಾಗೂ ಸದಸ್ಯರಾದ ವಿಜಯ ಪೂಜಾರಿ ಗೋಳಿಬೆಟ್ಟು, ಕಮಲ ಗಣೇಶ್ ಮಡಿವಾಳ ಐರೋಡಿ, ಐರೋಡಿ ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಪೂಜಾರಿ, ಮಾಜಿ ಅಧ್ಯಕ್ಷ ಮೋಸಸ್ ರೋಡ್ರಿಗಸ್, ಹಲವು ಮಕ್ಕಳು ತಾಯಿ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಸ್ ಶೆಟ್ಟಿ ಗಿಳಿಯಾರ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಮಾಜಿ ಸದಸ್ಯ ಅಚ್ಚುತ್ ಪೂಜಾರಿ, ವಕೀಲ ಮೊಹಮ್ಮದ್ ಸುಹಾನ್ ಗುಂಡ್ಮಿ, ರತ್ನಾಕರ್ ಪೂಜಾರಿ ಪಾರಂಪಳ್ಳಿ, ಕೋಟ ಬ್ಲಾಕ್ ಕಾಂಗ್ರೆಸ್ ನ ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿಗಾರ್, ಕೃಷ್ಣ ಮೂರ್ತಿ ಪೂಜಾರಿ ಪಡುಬೈಲ್, ಸುಧಾಕರ್ ಪೂಜಾರಿ ಶಿರಾಳ್ ಕೊಪ್ಪ, ಮಂಜುನಾಥ್ ಪೂಜಾರಿ ಗೋಳಿಬೆಟ್ಟು, ಗೌರಿ ಪೂಜಾರಿ ಗೋಳಿಬೆಟ್ಟು, ರಾಜು ದೇವಾಡಿಗ, ವಿಜಯ ಪೂಜಾರಿ ಗೋಳಿಬೆಟ್ಟು, ಮಿಥುನ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಹಲವು ಮಕ್ಕಳು ತಾಯಿ ಕೋಟ ಅಮೃತೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್ ಕೆ ನೆಲ್ಲಿಬೆಟ್ಟು ಸ್ವಾಗತಿಸಿ ವಂದಿಸಿದರು.
