ಕೋಟ ಜನತಾ ಸಂಸ್ಥೆಯಲ್ಲಿ ದೀಪಾವಳಿ ಸಡಗರ, ಸಾಂಸ್ಕೃತಿಕ ಕಾರ್ಯಕ್ರಮ
ಕುಂದಾಪುರ: ಜನತಾ ಫಿಶ್ ಮೀಲ್ ಕೋಟ- ಪಡುಕರೆಯಲ್ಲಿ ದೀಪಾವಳಿಯ ಪ್ರಯುಕ್ತ ಹಬ್ಬ -2025 ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಸಂಸ್ಥೆಯ ಮುಖ್ಯಸ್ಥ ಆನಂದ ಸಿ.ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನತಾ ಸಂಸ್ಥೆ ಒಂದು ಕುಟುಂಬವಿದ್ದಂತೆ ಹೀಗಾಗಿ ಹಬ್ಬಹರಿದಿನಗಳಂದು ನಾವೆಲ್ಲ ಒಟ್ಟಾಗಿ ಬೆರೆತು ಸಂಭ್ರಮಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂ ಎಲ್ಲರಿಗೂ ಶುಭ ಕೋರಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಎ ಕುಂದರ್ , ರಕ್ಷಿತ್ ಎ. ಕುಂದರ್, ಗೀತಾ ಆನಂದ ಸಿ ಕುಂದರ್ ,ದಿವ್ಯ ಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಅಣ್ಣಪ್ಪ ಶ್ರೀಯಾನ್, ಆನಂದ ಪಿ.ಸುವರ್ಣ ಜನತಾ ಸದಸ್ಯರು ಭಾಗಿಯಾದರು.
ಸಭಾ ಕಾರ್ಯಕ್ರಮದ ನಂತರ ಚಾರ್ವಿ ಕುಂದರ್, ಧನ್ಯತಾ ಕುಂದರ್ ಮತ್ತು ಅಕ್ಷರ ಕುಂದರ್ ಇವರಿಂದ ಯಕ್ಷಗಾನ, ಸಂಸ್ಥೆಯ ಸಿಬ್ಬಂದಿಗಳಿಂದ ಬಲೀಂದ್ರ ಪೂಜೆ, ನೃತ್ಯ, ಕುಣಿತ ಭಜನೆ, ಸಾಮಾಜಿಕ ನಾಟಕ ಮತ್ತು ನರಕಾಸುರ ವಧೆ ಎಂಬ ಪೌರಾಣಿಕ ನಾಟಕ ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಸಿಬ್ಬಂದಿಗಳಾದ ರೇಷ್ಮಾ ಜೋಗಿ ನಿರೂಪಿಸಿ, ಸುಪ್ರೀತ ಶರತ್ ವಂದಿಸಿದರು.
