ಉಡುಪಿ: ಜಿಲ್ಲೆಯಾದ್ಯಂತ ದೃಷ್ಟಿಯೋಜನೆ ಅನುಷ್ಠಾನ – ಎಸ್ಪಿ ಹರಿರಾಂ ಶಂಕರ್
ಕಾಪು: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ದೃಷ್ಠಿ ಯೋಜನೆಯನ್ನು ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೃಷ್ಠಿ ಯೋಜನೆ ಕಾರ್ಯಕ್ರಮವನ್ನು ಉಡುಪಿ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಂ ಶಂಕರ್ ಐಪಿಎಸ್ ರವರು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪ್ರತೀ ಠಾಣಾ ವ್ಯಾಪ್ತಿಯು ದೊಡ್ಡದಾಗಿದ್ದು, ಪ್ರತೀ ಠಾಣಾ ವ್ಯಾಪ್ತಿಯಲ್ಲಿ ಅಂದಾಜು 80 ಸಾವಿರದಿಂದ 1 ಲಕ್ಷ ಜನ ಸಂಖ್ಯೆ ಇದ್ದು, ಸುಮಾರು 1700 ರಿಂದ 1800 ಜನರ ಜವಾಬ್ದಾರಿಯೊಂದಿಗೆ ಕೇವಲ 40-60 ಜನ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಟ್ಟದಲ್ಲಿ ಪ್ರತೀ ಬೀಟಿನಲ್ಲಿ ಸುಮಾರು 80-100 ಮನೆಗಳ ಒಂದು Welfare Committee ಯನ್ನು ರಚಿಸುತ್ತಾರೆ. ಆ ಕಮಿಟಿಯಿಂದ ಓರ್ವ ಪ್ರೈವೇಟ್ ಸೆಕ್ಯೂರಿಟಿ ಗಾರ್ಡ್‌ನ್ನು ನೇಮಿಸಿ, ಈ ಬೀಟ್‌ಗಳಲ್ಲಿ ರಾತ್ರಿ ಗಸ್ತು ಕರ್ತವ್ಯವನ್ನು ನಿರ್ವಹಿಸುವಂತೆ ಮಾಡುವುದು ಹಾಗೂ ಬೀಟ್ ಪೊಲೀಸರು ಈ ಪ್ರೈವೇಟ್ ಸೆಕ್ಯೂರಿಟಿ ಗಾರ್ಡ್‌ನ ನಿರಂತರ ಸಂಪರ್ಕದಲ್ಲಿರುವುದು. ಇದು ಅವರ ಮನೆಗಳಿಗೆ ರಕ್ಷಣೆಯನ್ನು ನೀಡುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ರೀತಿಯ ಕಮಿಟಿಗಳನ್ನು ಮಾಡುವುದರಿಂದ ಆ ಪ್ರದೇಶಗಳಲ್ಲಿ ವಾಸವಾಗಿರುವ ಜನರ ರಕ್ಷಣೆ, ವಯೋವೃದ್ಧರ ಕಾಳಜಿ, ರಾತ್ರಿ ಗಸ್ತು ಮಾಡುವುದರಿಂದ ಆಸ್ತಿಪಾಸ್ತಿ, ಜೀವ ರಕ್ಷಣೆಗಳನ್ನು ಮಾಡಬಹುದಾಗಿದೆ ಎಂದರು.

ಈಗಾಗಲೇ ಕುಂದಾಪುರ ಉಪ ವಿಭಾಗದ ಕುಂದಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1, ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ1, ಕಾರ್ಕಳ ಉಪ ವಿಭಾಗದ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ1, ಉಡುಪಿ ಉಪ ವಿಭಾಗದ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ1, ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ1, ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ1, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1, ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕಮಿಟಿ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 14 ಕಮಿಟಿಗಳನ್ನು ರಚಿಸಿ ಈ ದೃಷ್ಠಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದವರು ಹೇಳಿದರು.

ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ಸರ್ವಜನಿಕರು ಭಾಗವಹಿಸಿದ್ದರು.
