ಕುಂದಾಪುರ: ತಾಲೂಕು ಆಸ್ಪತ್ರೆಗೆ ಕರ್ಣಾಟಕ ಬ್ಯಾಂಕ್ ನಿಂದ ಶವಗಾರ ಸ್ಟೋರೇಜ್ ಯೂನಿಟ್ ಹಸ್ತಾಂತರ

ಕುಂದಾಪುರ: ಇಲ್ಲಿನ ತಾಲೂಕು ಸರ್ಕಾರೀ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹಗಳನ್ನಿಡಲು ಅನುಕೂಲವಾಗಿವಂತೆ ಕರ್ಣಾಟಕ ಬ್ಯಾಂಕ್ ಕೊಡಮಾಡಿದ ಸುಸಜ್ಜಿತವಾದ 4 ಮೃತ ದೇಹಗಳ ಶೀಥಲೀಕರಣ ಸಾಮರ್ಥ್ಯದ ಸ್ಟೋರೇಜ್ ಯೂನಿಟ್ ನ್ನು ಶಾಸಕ ಕಿರಣ್ ಕೊಡ್ಗಿಯವರು ಆಸ್ಪತ್ರೆಗೆ ಹಸ್ತಾಂತರಿಸಿ, ಕರ್ಣಾಟಕ ಬ್ಯಾಂಕ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಇದುವರೆಗೆ ಶವಗಾರ ಸ್ಟೋರೇಜ್ ಯೂನಿಟ್ 2 ಮಾತ್ರ ಸರಿಯಾಗಿದ್ದು ಇದರಿಂದಾಗಿ ತಾಲೂಕಿನ ಜನತೆಗೆ ಮೃತ ದೇಹವನ್ನು ಇಡಲು ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿತ್ತು. ಶಾಸಕರ ಕೊಡ್ಗಿ ಶಿಫಾರಸ್ಸಿನ ಮೇರೆಗೆ ಕರ್ಣಾಟಕ ಬ್ಯಾಂಕ್ ನವರು ಸಿ.ಎಸ್.ಆರ್. ನಿಧಿಯಿಂದ ಸುಸಜ್ಜಿತ ನಾಲ್ಕು ಮೃತ ದೇಹಗಳನ್ನು ಇರಿಸುವ ಸಾಮರ್ಥ್ಯದ ಶವಗಾರ ಸ್ಟೋರೇಜ್ ಯೂನಿಟ್ ಕೊಡುಗೆ ನೀಡಿದ್ದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಚಂದ್ರ ಮರಕಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ಡಿಜಿಎಂ ವಾದಿರಾಜ ಭಟ್, ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ, ಮ್ಯಾನೇಜರ್ ರಾಘವೇಂದ್ರ, ಶ್ರೀ ಡಿಸ್ಟ್ರಿಬ್ಯೂಟರ್ ಮಾಲಕ ಅಶೋಕ್ ಉಪಸ್ಥಿತರಿದ್ದರು. ಆಸ್ಪತ್ರೆಯ ಸಿಬ್ಬಂದಿ ವರ್ಗ ಸೇರಿದಂತೆ ಪ್ರಮುಖರು ಹಾಜರಿದ್ದರು. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ನಾಗೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
