ಕೊಲ್ಲೂರು: ಮೂಕಾಂಬಿಕೆ ಸನ್ನಿಧಿಯಲ್ಲಿ ಸಂಭ್ರಮದ ಶರನ್ನವರಾತ್ರಿ : ಬುಧವಾರ ರಥೋತ್ಸವ
ಕುಂದಾಪುರ: ಸೆಪ್ಟಂಬರ್ 22ರಿಂದ ನವೆಂಬರ್ 2ರ ವರೆಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ನಡೆಯುತ್ತಿದೆ. ಈ ಬಾರಿಯ ವಿಶೇಷವೆಂದರೆ ದೇವಿಯ ದರ್ಶನಕ್ಕಾಗಿ ಆಗಮಿಸುವ ಎಲ್ಲಾ ಭಕ್ತರಿಗೂ ಬೆಳಗ್ಗೆ ಉಚಿತ ಫಲಾಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆಯುತ್ತದೆ.








ನವಮಿಯಂದು ಚಂಡಿಕಾಯಾಗ ಮತ್ತು ಮಧ್ಯಾಹ್ನ ರಥೋತ್ಸವ ನಡೆಯುತ್ತಿದೆ. ವಿಜಯದಶಮಿಯಂದು ವಿದ್ಯಾರಂಭ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಮೂಕಾಂಬಿಕೆ ಸನ್ನಿಧಿಗೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.








ಸೋಮವಾರ ಬೆಂಗಳೂರಿನ ಪುಲಕೇಶಿ ನಗರದ ಶಾಸಕ ಎ.ಸಿ.ಶ್ರೀನಿವಾಸ್, ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಖಾಯಂ ಆಹ್ವಾನಿತ ಸದಸ್ಯ ರವಿಶಂಕರ್ ಶೆಟ್ಟಿ, ದುಬೈ ಉದ್ಯಮಿ ಸುನಿಲ್ ದತ್ತ್ ಕುಟುಂಬ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ದಂಪತಿಗಳು, ಉತ್ತರಾಖಂಡದ ರಾಜ್ಯಪಾಲರು ಮೊದಲಾದವರು ದೇವಯ ದರ್ಶನ ಪಡೆದರು.