ಕುಂದಾಪುರ: ಉದ್ಯಮಿ ಅಶೋಕ್ ಸಾರಂಗ ಅನಾರೋಗ್ಯದಿಂದ ನಿಧನ
ಕುಂದಾಪುರ: ಇಲ್ಲಿನ ಖಾರ್ವಿಕೇರಿ ನಿವಾಸಿ ಚಿಪ್ಪು ಉದ್ಯಮಿ ಆಶಾ ಸೆಲ್ ಗ್ರಿಟ್ಟ್ ಮಾಲೀಕ, ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯ,ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ನ ಆಧಾರಸ್ತಂಭವಾಗಿದ್ದ ಅಶೋಕ ಸಾರಂಗ (51) ಅವರು ಇಂದು (ಸೋಮವಾರ) ಮಧ್ಯಾಹ್ನ ಅನಾರೋಗ್ಯದಿಂದ ನಿಧನರಾದರು.

ಅಶೋಕ ಸಾರಂಗ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧರಾಗಿದ್ದಾರೆ ಎಂದು ತಿಳಿದುಬಂದಿದೆ. ಅಶೋಕ ಸಾರಂಗ ಅವರು ಪತ್ನಿ ಉಷಾ, ಓರ್ವ ಮಗಳು ಮತ್ತು ಮಗ ಹಾಗೂ ಅಪಾರ ಬಂಧುಬಳಗ ಹಾಗೂ ಸ್ನೇಹಿತ ವರ್ಗವನ್ನು ಆಗಲಿದ್ದಾರೆ.