BlogCulturalEconomyEducationEntertainmentFashionHighlightsHuman storiesLifestyleLocal newsOthersSuccess storiesTop StoriesTrending

ವಿದ್ಯಾನಗರ: ಜ್ಞಾನಸರಸ್ವತಿ ಪಿಯು ಕಾಲೇಜಿನಲ್ಲಿ ಪ್ರಾಡಕ್ಟ್ ಪ್ರಮೋಷನ್ ದಿನಾಚರಣೆ – ಖುಷಿಯಿಂದ ಮಾರಾಟ ನಡೆಸಿದ ವಿದ್ಯಾರ್ಥಿಗಳು

Aware others:

ಕುಂದಾಪುರ: ಸಿದ್ದಾಪುರದ ಜ್ಞಾನಸರಸ್ವತಿ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಪ್ರಾಡಕ್ಟ್ ಪ್ರಮೋಷನ್ ದಿನಾಚರಣೆ ಸೆಪ್ಟಂಬರ್ 12 ರಂದು ನಡೆಯಿತು.

ಕಾಲೇಜಿನ ವಾಣಿಜ್ಯ ವಿಭಾಗ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸಂದರ್ಭ ಕಾಲೇಜಿನ ವಿದ್ಯಾರ್ಥಿಗಳು ತಾವು ತಯಾರಿಸಿದ ಉತ್ಪನ್ನಗಳನ್ನು ಖುಷಿಯಿಂದ ಮಾರಾಟ ಮಾಡಿದರು.  ಮಿನಿ ಬ್ಯುಸಿನೆಸ್‌ ಡೇ ಮಾದರಿಯ ಕಾರ್ಯಕ್ರಮವನ್ನು ಎಂಜಾಯ್ ಮಾಡಿದರು. ವಿಶೇಷವೆಂದರೆ, ವಿದ್ಯಾರ್ಥಿಗಳು ಸ್ವತಃ ತಾವೇ ತಯಾರಿಸಿದ ನಾನಾ ಬಗೆಯ ವಸ್ತುಗಳನ್ನು ಕಾಲೇಜಿಗೆ ತಂದು ವಿಶ್ಲೇಷಿಸಿ, ಅವರೇ ಸಂಕಲಿಸಿದ ಪ್ರಾಡಕ್ಟ್ ಪ್ರಮೋಷನ್ ವಿಡಿಯೋವನ್ನು ಪ್ರಸ್ತುತ ಪಡಿಸಿ, ಅದನ್ನು ಮಾರಾಟ ಮಾಡಿ ಸ್ಪರ್ಧೆಯ ಮೆರುಗನ್ನು ಹೆಚ್ಚಿಸಿದರು. 

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಉಪ ಪ್ರಾಂಶುಪಾಲ ಹರ್ಷ ಶೆಟ್ಟಿ ಮಾತನಾಡಿ ಇದು ಕೇವಲ ಆರಂಭವಷ್ಟೆ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ಸಹಕಾರದ ಜೊತೆಗೆ ವಿದ್ಯಾರ್ಥಿಗಳು ಮತ್ತು ಭೋದಕ ಭೋದಕೇತರ ತಂಡ ಇನ್ನಷ್ಟು ಕಾರ್ಯೋನ್ಮುಖರಾಗಿ ಒಂದಷ್ಟು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು.

ಆಡಳಿತ ಮಂಡಳಿಯ ಕಾರ್ಯದರ್ಶಿ ಪಾಂಡುರಂಗ ಪಡಿಯಾರ್, ಪ್ರಾಂಸುಪಾಲ ಅಮರೇಶ್ ಹೆಗ್ಡೆ, ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಹಾಗೂ ಕಾಲೇಜಿನ ವಿಜ್ಞಾನ ವಿಭಾಗದ ಸಂಯೋಜಕ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ಸ್ಫರ್ದೆಯ ತೀರ್ಪುಗಾರರಾಗಿ ಉಪನ್ಯಾಸಕರಾದ ಸುಜಯ್, ಕೆ.ಎಸ್.ಉಪಾದ್ಯಾಯ, ನಾಗರಾಜ್ ಗುಳ್ಳಾಡಿ,ಆದಿತ್ಯ ಎಚ್.ಆರ್, ನಯನ ಶೆಟ್ಟಿ, ಶ್ರಾವ್ಯ ಕಾರ್ಯ ನಿರ್ವಹಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಜಗದೀಶ್ ನಿರೂಪಿಸಿ, ಸಹ ಶಿಕ್ಷಕಿ ನಾಗರತ್ನ.ಜಿ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!