ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ಮೂವತ್ತ ನಾಲ್ಕನೇ ವಾರ್ಷಿಕ ಸಾಮಾನ್ಯಸಭೆ, ವಿದ್ಯಾರ್ಥಿ ವೇತನ, ಸಹಾಯಧನ ವಿತರಣೆ
ಕುಂದಾಪುರ: ರೋಸರಿ ಕ್ರೆಡಿಟ್ ಸಹಕಾರಿ ಸಂಘ ಈಗಾಗಲೇ ಹನ್ನೆರಡು ಶಾಖೆಗಳನ್ನು ಹೊಂದಿದ್ದು, ದೀನ, ದುರ್ಬಲರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಮುಖ್ಯ ಸಲಹೆಗಾರರೂ, ಕುಂದಾಪುರ ವಲಯ ಧರ್ಮಗುರು ವಂದನೀಯ ಫೌಲ್ ರೇಗೋ ಹೇಳಿದರು.





ಅವರು ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಕುಂದಾಪುರ ರೋಜರಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ಮೂವತ್ತ ನಾಲ್ಕನೇ ವಾರ್ಷಿಕ ಸಾಮಾನ್ಯಸಭೆ ಮತ್ತು ಸವಲತ್ತು ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.




ಇದೇ ಸಂದರ್ಭ ಐವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಮಾಜದ ಅತ್ಯಂತ ದೀನ ದುರ್ಬಲರಿಗೆ ಸಹಾಯಧನ ವಿತರಿಸಲಾಯಿತು. ಹನ್ನೆರಡು ಶಾಖೆಗಳ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು.




ಕುಂದಾಪುರ ರೋಜರಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿ ಅಲ್ಮೇಡಾ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಜರಿ ಕ್ರೆಡಿಟ್ ಕೊ ಅಪರೇಟಿವ್ ಸೊಸೈಟಿ ಪ್ರಮಾಣಿಕವಾಗಿ ನಗುಮೊಗದ ಸೇವೆ ನೀಡುತ್ತಾ ಬಂದಿದೆ. ರೋಜರಿ ಮಾತೆಯ ಆಶೀರ್ವಾದದೊಂದಿಗೆ ಮುಂದಿನ ದಿನಗಳಲ್ಲಿ ಸುಸಜ್ಜಿತವಾದ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿ ನಿರ್ಮಿಸಲು ಯೋಜನೆ ಸಿದ್ಧಗೊಳ್ಳುತ್ತಿದೆ ಎಂದರು.








ನಿರ್ದೇಶಕರಾದ ಫಿಲಿಪ್, ಡಿ’ಕೋಸ್ಟಾ ಬಸ್ರೂರು, ವಲೈಂಟೆನ್ ಡಿ’ಸೋಜ ಉಡುಪಿ, ಓಜ್ಜಿನ್ ಫ್ರಾನ್ಸಿಸ್ ರೆಬೆಲ್ಲೊ ತಲ್ಲೂರು, ಬ್ಯಾಪ್ತಿಸ್ಟ್ ಡಾಯಸ್ ಸಂತೆಕಟ್ಟೆ, ವಿನೋದ್ ಕ್ರಾಸ್ತಾ ಕುಂದಾಪುರ, ಟೆರೆನ್ಸ್ ಸುವಾರಿಸ್ ಉಡುಪಿ, ಡೆರಿಕ್ ಡಿ’ಸೋಜ ಸಾಸ್ತಾನ, ವಿಲ್ಸನ್ ಡಿ’ಸೋಜ ಶಿರ್ವ, ಶಾಂತಿ ಆರ್. ಕರ್ವಾಲ್ಲೊ ಕುಂದಾಪುರ, ಡಯಾನಾ ಅಲ್ಪನಾ, ಶಾಂತಿ ಡಾಯಸ್ ಬೈಂದೂರು, ಸಂತೋಷ್ ಓಜ್ಜಾಲ್ಡ್ ಡಿಸಿಲ್ವಾ, ಮೈಕಲ್ ಪಿಂಟೊ ಕೋಟೇಶ್ವರ, ರೋವನ್ ಡಿ’ಕೋಸ್ಟಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಲಿಪ್ ಡಿ’ಕೋಸ್ತಾ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೇಬಲ್ ಅಲ್ಮೇಡಾ ವರದಿ ವಾಚಿಸಿದರು. ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ ವಂದಿಸಿದರು. ಮೈಕೆಲ್ ಪಿಂಟೋ ನಿರೂಪಿಸಿದರು.