ವಿದ್ಯಾನಗರ: ಸಿದ್ಧಾಪುರದ ಜ್ಞಾನ ಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ
ಕುಂದಾಪುರ: ಇಲ್ಲಿನ ಸಿದ್ಧಾಪುರದ ವಿದ್ಯಾನಗರದಲ್ಲಿರುವ ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶನಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು.

ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀಯುತ ಬಿ.ಎಸ್. ಸುರೇಶ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀಕೃಷ್ಣ ವೇಷ ಹಾಕುವುದರಿಂದ ಬಾಲ್ಯದಿಂದಲೇ ಸಭಾಕಂಪನ ಕಡಿಮೆಯಾಗುವುದರ ಜೊತೆಗೆ ಸಾಂಸ್ಕೃತಿಕ ಮನೋಭಾವ ಹೆಚ್ಚುತ್ತದೆ ಎಂದರು.

ಸರಕಾರಿ ಪ್ರೌಢಶಾಲೆ ಸಿದ್ದಾಪುರದ ನಿವೃತ್ತ ಅದ್ಯಾಪಕ ನರಸಿಂಹ ನಾಯ್ಕ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶ್ರೀ ಕೃಷ್ಣ ಪರಮಾತ್ಮನ ಚರಿತ್ರೆಯನ್ನು ವಿವರಿಸಿದರು. ಜ್ಞಾನಸರಸ್ವತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಹಾಗೂ ಸರಸ್ವತಿ ವಿದ್ಯಾಲಯದ ಮುಖ್ಯೋಪಾಧ್ಯಾಯನಿ ಶ್ವೇತಾ ಗಣೇಶ್ ಉಪಸ್ಥಿತರಿದ್ದರು.

ಸುಮನಾ ಸಹ ಶಿಕ್ಷಕಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಜನಾ ಪ್ರಭು ಸ್ವಾಗತಿಸಿದರು. ನೂರಾರು ಬಾಲಕೃಷ್ಣರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದ ಪುಟಾಣಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.