BlogCrime newsEconomyEntertainmentFashionHighlightsHuman storiesLifestyleLocal newsOthersTop StoriesTrending

ಕುಂದಾಪುರ: ಅಡ್ಡಾದಿಡ್ಡಿ ಪಾರ್ಕಿಂಗ್ – ನಿರಂತರ ಟ್ರಾಫಿಕ್‌ಜಾಮ್

Aware others:

ಕುಂದಾಪುರ: ಅವೈಜ್ಞಾನಿಕ ಪಾರ್ಕಿಂಗ್ ನಿಂದಾಗಿ ಕುಂದಾಪುರ ಪೇಟೆಯಾದ್ಯಂತ ಕೃತಕ ಟ್ರಾಫಿಕ್‌ಜ್ಯಾಮ್ ಸಮಸ್ಯೆ ಎದುರಾಗಿದೆ. ಇದರಿಂದ ವಾಹನ ಸವಾರರೂ ಸೇರಿದಂತೆ ಪಾದಾಚಾರಿಗಳು ನಡೆದಾಡುವುದುಇ ಕಷ್ಟವಾಗಿದೆ.

ಕುಂದಾಪುರದ ಹೃದಯಭಾಗವಾದ ಕುಂದೇಶ್ವರ ಸ್ವಾಗತ ಗೋಪುರ ಪರಿಸರದಲ್ಲಿ ಪ್ರತಿದಿನ ಸುಶಿಕ್ಷಿತ ವಾಹನ ಚಾಲಕರ ಅಡ್ಡಾದಿಡ್ಡಿ ಪಾರ್ಕಿಂಗ್ ನಿಂದಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೇ‌ನಿಮಿಷಕ್ಕೆರಡು ಬಸ್ ಗಳು ಸಂಚರಿಸುತ್ತಿದ್ದು, ಕರ್ಕಶ ಹಾರ್ನ್ ಪರಿಸರದಲ್ಲಿ ಅಸಹನೀಯ ಸ್ಥಿತಿ ನಿರ್ಮಾಣವಾಗಿದೆ‌.

ವಾಹನ ಚಾಲಕರ ಪಾರ್ಕಿಂಗ್ ಧಾವಂತ ಮಿತಿ ಮೀರಿದ್ದು ಸಿಕ್ಕ ಕಡೆ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುತ್ತಿರುವುದರಿಂದ ರಸ್ತೆಯ ಅರ್ಧ ಭಾಗ ಬರೀ ಪಾರ್ಕಿಂಗ್ ಗೆ ಮೀಸಲಾಗುತ್ತಿದ್ದು ಇನ್ನರ್ಧ ಭಾಗದಲ್ಲಿ ಕಷ್ಟಪಟ್ಟು ವಾಹನ ಚಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸಂಚಾರಿ ಪೊಲೀಸರು ಮತ್ತು ಪುರಸಭೆ ಸಮಾಲೋಚನೆ‌ ನಡೆಸಿ ಇತರೆಡೆಗಳಲ್ಲಿರುವಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!