ವಿದ್ಯಾರಣ್ಯ: ಆಗಸ್ಟ್ 17ರಂದು ಮುದ್ದು ಕೃಷ್ಣ ಸ್ಪರ್ಧೆ – ಸು ಫ್ರಮ್ ಸೋ ರವಿಯಣ್ಣರಿಂದ ಉದ್ಘಾಟನೆ
ಕುಂದಾಪುರ: ಸುಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸಾರ್ವಜನಿಕರಿಗಾಗಿ ಆಗಸ್ಟ್ 17ರಂದು ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮುದ್ದುಕೃಷ್ಣ ಸ್ಪರ್ಧೆಯನ್ನು ಸು ಫ್ರಮ್ ಸೋ ಸಿನೆಮಾದ ರವಿಯಣ್ಣ (ಸನಿಲ್ ಗೌತಮ್) ಉದ್ಘಾಟಿಸಲಿದ್ದಾರೆ. ಎರಡು ವಿಭಾಗದಲ್ಲಿ ನಡೆಸಲಾಗುವ ಸ್ಪರ್ಧೇಯಲ್ಲಿ 1 ವರ್ಷದಿಂದ 3 ವರ್ಷದ ವರೆಗಿನ ಮಕ್ಕಳಿಗೆ( ಜೂನಿಯರ್ಸ್) ಹಾಗೂ 3 ವರ್ಷದಿಂದ 6 ವರ್ಷದ ವರೆಗಿನ ಮಕ್ಕಳಿಗೆ (ಸೀನಿಯರ್ಸ್) ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲಿ ವಿಜೇತರಾದವರಿಗೆ ವಿಶೆಷ ಬಹುಮಾನವಿದ್ದು, ಪ್ರಥಮ ಬಹುಮಾನ ಹತ್ತು ಸಾವಿರ ರೂಪಾಯಿಗಳು, ದ್ವಿತೀಯ ಬಹುಮಾನ ಏಳೂವರೆ ಸಾವಿರ ರೂಪಾಯಿಗಳು ಮತ್ತು ತೃತೀಯ ಬಹುಮಾನವಾಗಿ ಐದು ಸಾವಿರ ರೂಪಾಯಿ ಹಾಗೂ ಫಲಕ ಮತ್ತು ಪ್ರಮಾಣ ಪತ್ರದೊಂದಿಗೆ ಹಾಗೂ ಭಾಗವಹಿಸುವ ಪ್ರತಿ ಸ್ಪರ್ಧಿಗಳಿಗೂ ಸ್ಮರಣಿಕೆ ಹಾಗೂ ಪ್ರಶಂಸನಾ ಪತ್ರ ನೀಡಲಾಗುತ್ತದೆ.

ಸ್ಪರ್ಧೆಱಯಲ್ಲಿ ಭಾಗವಹಿಸುವ ಮಗುವಿನ ಜನನ ಪ್ರಮಾಣ ಪತ್ರದ ಪ್ರತಿಯನ್ನು ಸ್ಪರ್ಧೆಯ ದಿನ ನೋಂದಣಿ ವಿಭಾಗದಲ್ಲಿ ಸಲ್ಲಿಸಬೇಕು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಆಸಕ್ತರು ದಿನಾಂಕ ಶುಕ್ರವಾರ(ಆಗಸ್ಟ್ 16)ದೊಳಗೆ ತಮ್ಮ ಮಗುವಿನ ಆಧಾರ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರವನ್ನು 88678 53401 ಅಥವಾ 9964291755 ವಾಟ್ಸಾಪ್ ಸಂಖ್ಯೆಗೆ ಕಳುಹಿಸಿದ ನಂತರ ನೋಂದಣಿ ಲಿಂಕ್ ಕಳುಹಿಸಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
