BlogCulturalEntertainmentFashionHighlightsHuman storiesLifestyleLocal newsOthersReligionTop StoriesTrendingWomen Care

ಕುಂದಾಪುರ: ಬಿಲ್ಲವ ಮಹಿಳಾ ಸಂಘದ ವತಿಯಿಂದ ಸಂಭ್ರಮದ ವರಮಹಾಲಕ್ಷ್ಮೀ ವೃತ ಸಂಪನ್ನ

Aware others:

ಕುಂದಾಪುರ: ರಾಜ್ಯದೆಲ್ಲೆಡೆ ನಡೆಯುತ್ತಿರುವ ಶ್ರೀ ಮರಮಹಾಲಕ್ಷ್ಮೀ ವೃತದ ಅಂಗವಾಗಿ ಕುಂದಾಪುರದ ಬಿಲ್ಲವ ಮಹಿಳಾ ಸಂಘದ ವತಿಯಿಂದ ಶುಕ್ರವಾರ ನಾರಾಯಣಗುರು ಸಭಾಭವನದಲ್ಲಿ ಸಂಭ್ರಮದ ವರಮಹಾಲಕ್ಷ್ಮೀ ವೃತ ಸಂಪನ್ನಗೊಂಡಿತು. 

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಮಾಜೀ ಕಾರ್ದರ್ಶಿಗಳಾದ ಹೇರಿಕುದ್ರು ಆನಂದ ಮಾಸ್ತರ್ ಹಾಗೂ ಅವರ ಪತ್ನಿ ಪ್ರೇಮಾ ಆನಂದ್ ಅವರು ವರಮಹಾಲಕ್ಷ್ಮೀ ವೃತದ ಪೂಜಾಸಂಕಲ್ಪ ನೆರವೇರಿಸಿದರು.  ಖ್ಯಾತ ಪುರೋಹಿತರಾದ ಕೋಟದ ಬಲರಾಮ ಸೋಮಯಾಜಿ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. 

ಬಿಲ್ಲವ ಮಹಿಳಾ ಸಂಘದ ಮಾಜೀ ಅಧ್ಯಕ್ಷೆ, ಸಲಹಾ ಸಮಿತಿ ಸದಸ್ಯೆ ಕಲ್ಪನಾ ಭಾಸ್ಕರ್ ಅವರು ವರಮಹಾಲಕ್ಷ್ಮೀ ಸ್ತೋತ್ರ ವಾಚಿಸಿದರು. ಸಂಘದ ಅಧ್ಯಕ್ಷೆ ಗಿರಿಜಾ ಮಾಣಿಗೋಪಾಲ್  ನೇತೃತ್ವ ವಹಿಸಿದ್ದರು.

ಕುಂದಾಪುರ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಮಹಿಳಾ ಸಂಘದ ಕಾರ್ಯದರ್ಶಿ ಗುಲಾಬಿ ಜಯಸೂರ್ಯ, ಉಪಾಧ್ಯಕ್ಷರಾದ ಸುಶೀಲಾ ಶಂಕರ್, ಸುಶೀಲಾ ಪದ್ಮನಾಭ, ಕಮಲಾ ಶ್ರೀನಿವಾಸ, ಕುಸುಮಾ ಗೋಪಾಲ್, ವಿಜಯಲಕ್ಷ್ಮೀ ನಾಗಪ್ಪ, ಜೊತೆ ಕಾರ್ಯದರ್ಶಿ ಅನುಪಮಾ ಕಿಶೋರ್, ಖಜಾಂಚಿ ಶೋಭಾ ಮೋಹನ್, ಸಾಂಸ್ಕೃತಿಕ ಕಾರ್ಯದರ್ಶಿ ಗೀತಾ ಸುಧಾಕರ್, ಸುಳೀಲಾ ಆನಂದ್, ಕ್ರೀಡಾ ಕಾರ್ಯದರ್ಶಿ ಶೈಲಾ ಗಂಗಾಧರ, ಸಂಘಟನಾ ಕಾರ್ಯದರ್ಶಿಗಳಾದ ಶೋಭಾ ಬಸವ, ಜಾನಕಿ ಬಿಲ್ಲವ, ಮಾಜೀ ತಾಲೂಕು ಪಂಚಾಯತ್ ಸದಸ್ಯೆ ಹೇಮಾ ಪೂಜಾರಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಬಿಲ್ಲವ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಜನೆಯಲ್ಲಿ ಪಾಲ್ಗೊಂಡಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!