BlogEconomyEntertainmentFashionGovernmentHighlightsHuman storiesLifestyleLocal newsNational NewsOthersProtestState newsTop StoriesTrending

ಬ್ರಹ್ಮಾವರ: ಸರ್ವೀಸ್ ರಸ್ತೆ, ಮತ್ತು ಫ್ಲೈ ಓವರ್ ಕಾಮಗಾರಿಗೆ ಆಗಸ್ಟ್ 30 ಡೆಡ್ ಲೈನ್ – ಸೆಪ್ಟಂಬರ್ 4ರಂದು ಬಂದ್ ಎಚ್ಚರಿಕೆ

Aware others:

ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ
ಶ್ರೀ ಗೋವಿಂದ ರಾಜ್ ಹೆಗ್ಡೆ, ಸಂಚಾಲಕರು, ಹೆದ್ದಾರಿ ಉಳಿಸಿ ಹೋರಾಟ ಸಮಿತಿ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಎಸ್.ಎಮ್.ಎಸ್. ವರೆಗೆ ಎರಡೂ ಕಡೆಗಳಲ್ಲಿ  ಸರ್ವಿಸ್ ರಸ್ತೆ ಪೂರ್ಣಗೊಳಿಸುವುದು ಹಾಗೂ ಸೆವೆನ್ ಫಿಲ್ಲರ್ ಫ್ಲೈ ಓವರ್ ಗೆ ಅನುಮೋದನೆ ನೀಡುವುದನ್ನು ಖಾತರಿಪಡಿಸಬೇಕು. ಇಲ್ಲವಾದರೆ ಸೆಪ್ಟಂಬರ್ 4ರಂದು ಬ್ರಹ್ಮಾವರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಗೋವಿಂದರಾಜ್ ಹೆಗ್ಡೆ ಎಚ್ಚರಿಸಿದ್ದಾರೆ.

ಈ ಬಗ್ಗೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು,  ಜು.26ರಂದು ಬ್ರಹ್ಮಾವರ ಆಶ್ರಯ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆಯವರ ಅಧsಕ್ಷತೆಯಲ್ಲಿ ಸಭೆ ನಡೆಸಿ ಸೆಪ್ಟಂಬರ್ 4 ರಂದು ಬ್ರಹ್ಮಾವರ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಬ್ರಹ್ಮಾವರದಲ್ಲಿ ಮಾಬುಕಳದಿಂದ ಭದ್ರಗಿರಿಯವರೆಗೆ ಎರಡು ಕಡೆಗಳಲ್ಲಿ ತುರ್ತಾಗಿ ಸರ್ವಿಸ್ ರಸ್ತೆ ನಿರ್ಮಿಸಬೇಕು. ಬ್ರಹ್ಮಾವರದಲ್ಲಿ 7 ಪಿಲ್ಲರ್ ಪ್ಲೈಓವರ್‌ಗಳನ್ನು ಮಾಡಬೇಕು. ಮೂರು ಕಡೆಗಳಲ್ಲಿ ಮಿಡಿಯನ್ ಓಪನ್ ಮಾಡಬೇಕು. ಇದಕ್ಕೆ ಅಗಸ್ಟ್ ಅಂತ್ಯದವರೆಗೆ ನಾವು ಕಾಯಲಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಪತ್ರ ಬರೆಯಲಿದ್ದೇವೆ ಎಂದು ಹೇಳಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!