BlogCrime newsEconomyFashionHighlightsHuman storiesLifestyleLocal newsNational NewsOthersState newsTechTop StoriesTrendingWomen Care

ಅಕ್ಕಿ ಕೊಡುವುದಾಗಿ ಹೇಳಿ 1.13 ಕೋಟಿ ವಂಚನೆ : ಪ್ವಿಪ್ ಫುಡ್ ಟೆಕ್ ಕಂಪೆನಿಯ ಮೂವರ ವಿರುದ್ಧ ದೂರು ದಾಖಲು

Aware others:

ಉಡುಪಿ: ರಪ್ತು ಮಾಡಲು ಅಕ್ಕಿ ಕೊಡುವುದಾಗಿ ಹೇಳಿ ಇಂಪೋರ್ಟ್ ಎಕ್ಸ್ ಪೋರ್ಟ್ ಕಂಪೆನಿಯೊಂದಕ್ಕೆ 1.13 ಕೋಟಿ ರೂಪಾಯಿ ವಂಚಿಸಿದ್ದಾಗಿ ಪುಣೆಯ ಮಹಿಳೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ವಿಪ್ ಕಂಪೆನಿ ಸಿಇಒ ಧನರಾಜ್

ಮಹಾರಾಷ್ಟ್ರದ 656 ಪುಣೆ ಸಿಟಿಯ Winwin Exim India ಎಂಬ ಎಕ್ಸ್‌ಪೋರ್ಟ್‌ ಇಮ್‌ಪೋರ್ಟ್‌ ಕಂಪೆನಿಯ ಮಾಲಕಿ ಧನಶ್ರೀ ಮನೋಹರ್‌ ಖಾಲೇ ದೂರು ದಾಖಲಿಸಿದವರು. ಧನಶ್ರೀಯವರು 2022ರಲ್ಲಿ ಅವರ ಸ್ನೇಹಿತರೊಬ್ಬರ ಮೂಲಕ PWIP ಫುಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸಿಇಓ ಉಡುಪಿಯ ಧನ್‌ರಾಜ್‌ ಹಿರಿಯಣ್ಣ, ಅದೇ ಕಂಪೆನಿಯ ಉದ್ಯೋಗಿಗಳಾಗಿದ್ದ  ಅಭಿಷೇಕ್‌ ರೆಶ್ಮಿ ಹಾಗೂ ಕಾರ್ತಿಕ್‌ ಎಮ್. ಇವರ ಪರಿಚಯವಾಗಿತ್ತು.

ಬಳಿಕ ಅವರ ಜೊತೆ ಬೆಂಗಳೂರು ಮಹಾಲಕ್ಷ್ಮೀ ಲೇಔಟ್‌ ನಲ್ಲಿರುವ ಕಂಪೆನಿಯಲ್ಲಿ 2022ರ ಡಿಸೆಂಬರ್ 12ರಿಂದ PWIP ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡು, ವ್ಯವಹಾರ ಮಾಡುತ್ತಿದ್ದರು. 2023 ರ ಜೂನ್‌ ತಿಂಗಳಲ್ಲಿ ಪಧನಶ್ರೀಯವರು 1.13 ಕೋಟಿ ಹಣವನ್ನು ಮುಂಗಡವಾಗಿ ಪಾವತಿಸಿದ್ದರು. 2023 ಜುಲೈ ತಿಂಗಳಲ್ಲಿ ಭಾರತ ಸರಕಾರ ಅಕ್ಕಿ ರಫ್ತು ನಿಷೇಧವನ್ನು ಘೋಷಿಸಿದ್ದು, ಆ ಬಳಿಕ ಆರೋಪಿಗಳಾದ  PWIP ಫುಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸಿಇಓ ಧನ್‌ರಾಜ್‌ ಹಿರಿಯಣ್ಣ, ಅದೇ ಕಂಪೆನಿಯ ಉದ್ಯೋಗಿಗಳಾಗಿದ್ದ  ಅಭಿಷೇಕ್‌ ರೆಶ್ಮಿ ಹಾಗೂ ಕಾರ್ತಿಕ್‌ ಎಮ್. ಈ ವರೆಗೆ ಧನಶ್ರೀಯವರು ಪಾವತಿಸಿದ ಮುಂಗಡ ಹಣವನ್ನು ಹಿಂದಿರುಗಿಸದೇ ಅವರಿಗೆ ಅಕ್ಕಿಯನ್ನೂ ರಫ್ತು ಮಾಡದೇ  1.13 ಕೋಟಿ ರೂಪಾಯಿಗಳನ್ನು ವಂಚಿಸಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 ಈ ಬಗ್ಗೆ ಉಡುಪಿ ಸೆನ್‌ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2025 ಕಲಂ: 406, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!