ಇಸ್ಪೀಟ್ ಅಡ್ಡೆಗೆ ದಾಳಿ : ನಾಲ್ಕು ಜನ ಹಾಗೂ ಸೊತ್ತು ವಶಕ್ಕೆ – ಇಬ್ಬರು ಪರಾರಿ
ಕುಂದಾಪುರ: ಇಸ್ಪೀಟ್ ಅಡ್ಡೆಗೆ ದಾಳಿ ನಮಾಡಿದ ಪೊಲೀಸರು ನಾಲ್ಕು ಜನ ಾರೋಪಿಗಳನ್ನು ಹಾಗೂ ಆಟಕ್ಕೆ ಬಳಸಿದ್ದ ವಸ್ತುಗಳು ಹಾಗೂ ನಗದನ್ನು ವಶಪಡಿಸಿಕೊಂಡ ಘಟನೆ ಕುಂದಾಪುರ ತಾಲೂಕು ಕಟ್ ಬೆಲ್ತೂರು ಗ್ರಾಮದ ಹರೆಗೋಡು ಶ್ರೀ ನಂದಿಕೇಶ್ವರ ಸಹಪರಿವಾರ ದೈವಸ್ಥಾನದ ಹತ್ತಿರ ನಡೆದಿದೆ. ವಶಕ್ಕೆ ಪಡೆದ ಆರೋಪಿಗಳನ್ನು ಸ್ಥಳೀಯರಾದ ಸಂಜೀವ, ಚಂದ್ರ, ಕೋಟಿ ಪೂಜಾರಿ ಹಾಗೂ ಸಂಪತ್ ಎಂದು ಗುರುತಿಸಲಾಗಿದೆ. ಗಣೇಶ್ ಸುಳ್ಸೆ ಹಾಗೂ ಮಂಜುನಾಥ ಎಂಬ ಇಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.

ಹರೆಗೋಡು ಶ್ರೀ ನಂದಿಕೇಶ್ವರ ಸಹಪರಿವಾರ ದೈವಸ್ಥಾನದ ಹತ್ತಿರದ ಕೆರೆಯ ಬದಿಯ ಖಾಲಿ ಜಾಗದಲ್ಲಿ ಇಸ್ಪೀಟು ಆಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ ಐ ಭೀಮಾಶಂಕರ ಸಿನ್ನೂರ ಸಂಗಣ್ಣ ತಂಡ ದಾಳಿ ನಡೆಸಿತ್ತು. ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ್ದ 1,640 ರೂಪಾಯಿ ನಗದು, ಇಸ್ಪೀಟ್ ಎಲೆಗಳು, ನೋಕಿಯಾ ಕಂಪೆನಿಯ ಕೀ-ಪ್ಯಾಡ್ ಮೊಬೈಲ್, ಒಂದು ಬೈಕ್, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
