ಬೀಜಾಡಿ: ಮೀನುಗಾರಿಕಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಅಶೋಕ ಪೂಜಾರಿ ಬೀಜಾಡಿ – ಜುಲೈ 20ರಂದು ಅಭಿನಂದನಾ ಸಮಾರಂಭ
ಕುಂದಾಪುರ: ಸಂಘಟನಾ ಚತುರ, ಮಾಜಿ ತಾಲೂಕು ಪಂಚಾಯತ್ ಸದಸ್ಯ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿರುವ ಅಶೋಕ ಪೂಜಾರಿ ಬೀಜಾಡಿ ಇವರು ಬೀಜಾಡಿ ಮೀನುಗಾರಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಪ್ರಸಿದ್ಧರಾಗಿರುವ ಅಶೋಕ್ ಪೂಜಾರಿಯವರು ಬಿಲ್ಲವರ ಜಾತಿ ಗಣತಿ, ಬಿಲ್ಲವ ಸಂಸ್ಕೃತಿ ಉಳಿವಿಗಾಗಿ ತಲೆಮಾರುಗಳಿಗೆ ಸನ್ಮಾನ, ವಿದ್ಯಾರ್ಥಿ ವೇತನ, ಾರೋಗ್ಯ ಚೇತನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದಾರೆ. ಬಿಲ್ಲವ ಬಡ ಕುಟುಂಬಗಳಿಗೆ ಆರ್ಥಿಕ ಧನಸಾಹಯವನ್ನೂ ಮಾಡುತ್ತಾ ಬಂದಿರುವ ದಾನಿ ಅಶೋಕ್ ಪೂಜಾರಿ ಬೀಜಾಡಿಯವರು ಸುಮಾರು 18,000 ಸಾವಿರಕ್ಕೂ ಮಿಕ್ಕಿ “ಅ” ದರ್ಜೆಯ ಸದಸ್ಯರನ್ನು ಹೊಂದಿರುವ, ಕುಂದಾಪುರ ಹಾಗೂ ಬೈಂದೂರು ಎರಡು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುವ ಬೀಜಾಡಿ ಮೀನುಗಾರಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಜುಲೈ 20ರ ಭಾನುವಾರ ಮಧ್ಯಾಹ್ನ 2.30ಕ್ಕೆ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸರ್ವರನ್ನೂ ಆಮಂತ್ರಿಸಲಾಗಿದೆ.
