BlogEconomyEducationGovernmentHighlightsHuman storiesLifestyleLocal newsNatureOthersState newsSuccess storiesTop StoriesTrending

ಕೊಲ್ಲೂರು: ಪರಿಸರ ರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಮಾಸಿಕ ಗಡುವು! – ಹಸಿರು ಪೀಠದಿಂದ ಮಧ್ಯಂತರ ನಿರ್ದೇಶನ

Aware others:

ಕುಂದಾಪುರ: ಕೊಲ್ಲೂರು ಪರಿಸರ ಸಂರಕ್ಷಣೆಗೆ ಮತ್ತು ಮಾಲಿನ್ಯ ನಿಯಂತ್ರಣಗಳಿಗೆ ಸಂಬಂಧಿಸಿ ಮದ್ರಾಸ್ ಸರ್ವೋಚ್ಚ ನ್ಯಾಯಾಲಯದ ದಕ್ಷಿಣ ವಲಯದ ಹಸಿರು ಪೀಠವು ಉಡುಪಿ ಜಿಲ್ಲಾಧಿಕಾರಿಗಳಿಗೆ ಮಹತ್ತರವಾದ ನಿರ್ದೇಶನ ನೀಡಿದೆ.

ಕೊಲ್ಲೂರಿನ ಪುಣ್ಯ ನದಿಗಳ ಮಾಲಿನ್ಯ, ಪರಿಸರ ನಾಶ ಹಾಗೂ ಭೂ ಅತಿಕ್ರಮಣಗಳ ವಿರುದ್ಧ ದಾಖಲಾಗಿರುವ ದೂರು ಅರ್ಜಿಯ ವಿಚಾರಣೆ ನಡೆಸುತ್ತಿರುವ ಹಸಿರು ಪೀಠದ ನ್ಯಾಯಮೂರ್ತಿಗಳಾದ ಪುಷ್ಪಾ ಸತ್ಯನಾರಾಯಣ ಜೆಎಂ ಹಾಗೂ ಡಾ.ಸತ್ಯಗೋಪಾಲ್ ಕೊರ್ಲಪಟ್ಟಿ ಇಎಂ ಅವರುಗಳು ನಿರ್ದೇಶನದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಂಡು ವರದೊ ನೀಡುವಂತೆ ಜುಲೈ 9ರಂದು ಹೊರಡಿಸಿದ ಮಧ್ಯಂತರ ನಿರ್ದೇಶನದಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ಹೆಸರಿಸಲಾದವರು ಮತ್ತು ನಂತರ ಕಂಡು ಬಂದ ಇತರರನ್ನು ಒಳಗೊಂಡಂತೆ ಎಲ್ಲಾ ನಿಯಮ ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಎಸ್‌ಪಿಸಿಬಿ (ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ) ಕಾನೂನು ಕ್ರಮ ಜರುಗಿಸಬೇಕು. ಎಸ್‌ಟಿಪಿಗಳನ್ನು ತಕ್ಷಣ ಆದ್ಯತೆಯಲ್ಲಿ ಸ್ಥಾಪಿಸಿ ಕಾರ್ಯಗತಗೊಳಿಸಬೇಕು.

ಉಡುಪಿ ಜಿಲ್ಲಾಧಿಕಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಗ್ರಾಮೀಣ ನೀರು ಸರಬರಾಜು ಮಂಡಳಿ ಹಾಗೂ ಎಲ್ಲಾ ವಾಣಿಜ್ಯ ಘಟಕಗಳೊಂದಿಗೆ ಸಮನ್ವಯ ಸಾಧಿಸಬೇಕು. ಗೃಹ ಮತ್ತು ವಾಣಿಜ್ಯ ಒಳಚರಂಡಿ (ಯುಜಿಡಿ) ಸಂಪರ್ಕಗಳು ಪೂರ್ಣಗೊಂಡಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

ಹಸಿರು ಪೀಠದ ನಿರ್ದೇಶನಗಳನ್ನು ನಾಲ್ಕು ವಾರಗಳ ಒಳಗೆ ಪಾಲಿಸಬೇಕು. ಅದಕ್ಕಾಗಿ ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಕೊಲ್ಲೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ತಲೆ ಎತ್ತುತ್ತಿರುವ ವಸತಿಗೃಹಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ಉಂಟಾಗುತ್ತಿರುವ ಜಲ ಹಾಗೂ ಪರಿಸರ ಮಾಲಿನ್ಯದಿಂದಾಗಿ ಪುಣ್ಯ ಕ್ಷೇತ್ರಕ್ಕೆ ಬರುವ ಕೋಟ್ಯಾಂತರ ಭಕ್ತರಿಗೆ, ಪುಣ್ಯ ನದಿಯಲ್ಲಿ ಆಶ್ರಯ ಪಡೆದುಕೊಂಡಿರುವ ಅಮೂಲ್ಯ ಜಲಚರಗಳಿಗೆ, ಪ್ರಾಣಿ ಸಂಕುಲಗಳಿಗೆ ರಕ್ಷಣೆ, ಕೊಲ್ಲೂರು ಹಾಗೂ ಆಸುಪಾಸಿನ ಗ್ರಾಮಗಳ ಆರೋಗ್ಯ ರಕ್ಷಣೆ ಮತ್ತು ಸರ್ಕಾರಿ ಹಾಗೂ ದೇವಸ್ಥಾನದ ಭೂಮಿಗಳ ಅತಿಕ್ರಮಣಗಳನ್ನು ತಡೆಯುವ ಉದ್ದೇಶಗಳಿಗಾಗಿ ಹಸಿರು ಪೀಠದಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ಮಂಗಳೂರಿನ ಎನ್‌ಇಸಿಎಫ್ ಹಾಗೂ ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸೊಸೈಟಿ ಮಂಗಳೂರು ಇವರುಗಳು 2022 ರಲ್ಲಿ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ದಕ್ಷಿಣ ವಲಯ ಹಸಿರು ಪೀಠ 2024 ರಲ್ಲಿ ಅರ್ಜಿ ವಿಚಾರಣೆಗೆ ಅಂಗೀಕಾರ ನೀಡಿತ್ತು. 

ಹಸಿರು ಪೀಠದ ಮಧ್ಯಂತರ ಅದೇಶಕ್ಕೆ ಜಿಲ್ಲಾಡಳಿತ ಯಾವ ರಿಒತಿಯ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Aware others:

Leave a Reply

Your email address will not be published. Required fields are marked *

error: Content is protected !!