BlogCrime newsHighlightsHuman storiesLifestyleLocal newsOthersPoliticsState newsTop StoriesTrendingWomen Care

ಪುತ್ತೂರು: ಒಂದೇ ದಿನದಲ್ಲಿ ಜಗನ್ನಿವಾಸ್ ರಾವ್ ಗೆ ಜಾಮೀನು ನೀಡಿದ ನ್ಯಾಯಾಲಯ!?

Aware others:

ಫವರ್ ಪಾಲಿಟಿಕ್ಸ್!!!

ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿ ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿದ್ದ ಆರೋಪಿ ಕೃಷ್ಣ ಜೆ. ರಾವ್ (21) ಪರಾರಿಯಾಗಲು ಮತ್ತು ಆರೋಪಿಯನ್ನು ಸಿಗದಂತೆ‌ ಮಾಡಲು ಸಹಕರಿಸಿದ ಆರೋಪದಡಿ ಆರೋಪಿಯ ತಂದೆ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ನನ್ನು ಬಂಧಿಸಲಾಗಿದ್ದು, ಒಂದೇ ದಿನದಲ್ಲಿ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆರೋಪಿ ಕೃಷ್ಣ ಜೆ ರಾವ್ ತಂದೆ ಜಗನ್ನಿವಾಸ ರಾವ್

ಆರೋಪಿ ಕೃಷ್ಣ ಜೆ ರಾವ್ ನಾಪತ್ತೆಯಾದ ಬಳಿಕ  ಆತನಿಗೆ ಆಶ್ರಯ ನೀಡಿದ್ದ ಸಂಬಂಧಿಕರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಆ ವೇಳೆ ಆರೋಪಿಯ ಸುಳಿವು ಪತ್ತೆಯಾಗಿತ್ತು. ಆರೋಪಿ ತಪ್ಪಿಸಿಕೊಂಡ ನಂತರ ಆತನ ಸುಳಿವು ಸಿಗದಂತೆ ಜಗನ್ನಿವಾಸ ರಾವ್ ಮಾಡಿದ್ದ ಎನ್ನಲಾಗಿದೆ. ಜು.4 ರಂದೇ ಜಗನ್ನಿವಾಸನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!