BlogCrime newsHighlightsHuman storiesLifestyleLocal newsOthersTop StoriesTrendingWomen Care

ಪುತ್ತೂರು|ದ.ಕ: ನಾಪತ್ತೆಯಾದ ರೂಪಾ ಬೆಂಗಳೂರಿನಲ್ಲಿ ಪತ್ತೆ!

Aware others:

ಮಂಗಳೂರು: ಜೆರಾಕ್ಸ್ ಮಾಡಿಸಲು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿ ನಾಪತ್ತೆಯಾಗಿದ್ದ ಪುತ್ತೂರು ತಾಲೂಕಿನ ಪಡ್ನರ್ ಮುಂಡಾಜೆ ನಿವಾಸಿ ಗಿರಿಜಾ ದೇವಿ, ಮಂಟು ಪಾಸ್ವಾನ ದಂಪತಿ ಪುತ್ರಿ  ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರೂಪಾ (19)ಳನ್ನು ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ

ತಾಯಿ ಮಂಗಳೂರಿನ ನರ್ಸಿಂಗ್ ಹೋಮ್‌ನಲ್ಲಿ ತಂದೆ ಉಡುಪಿಯಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದು ಮನೆಯಲ್ಲಿ ರೂಪ ಮತ್ತು ಆಕೆಯ ತಮ್ಮ ವಾಸವಿದ್ದರು. ರೂಪಾ ಜೆರಾಕ್ಸ್ ಮಾಡಿಸಲು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಮನೆಗೂ ಹೋಗದೆ ಸಂಬಂಧಿಕರಲ್ಲಿಗೂ ಹೋಗದೆ, ಸ್ನೇಹಿತರಲ್ಲಿಗೂ ತೆರಳದೆ ನಾಪತ್ತೆಯಾಗಿರುವುದಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಕೆಯ ಪತ್ತೆಗಾಗಿ ಪೊಲೀಸರು ಪರಿಸರದಲ್ಲಿ ಕೂಬಿಂಗ್ ನಡೆಸಿದ್ದರು. ಪೊಲೀಸರ ಶ್ರಮದಿಂದ ಆಕೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು ಪೊಲೀಸರು ಆಕೆಯನ್ನು ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ನಾಪತ್ತೆ ಪ್ರಕರಣದ ಹಿನ್ನೆಲೆ ತಿಳಿದು ಬಂದಿಲ್ಲ.


Aware others:

Leave a Reply

Your email address will not be published. Required fields are marked *

error: Content is protected !!