Local newsBlogCrime newsHealthHighlightsHuman storiesLifestyleObituaryOthersPoliticsState newsTop StoriesTrending

ಹಿಂದುಳಿದ ವರ್ಗಗಳ ಗಟ್ಟಿಧ್ವನಿ, ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ  ಜಯಾನಂದ ದೇವಾಡಿಗ‌ ನಿಧನ

Aware others:

ಮೂಲ್ಕಿ ಜಯಾನಂದ ದೇವಾಡಿಗ

ಮೂಲ್ಕಿ: ಚಿನ್ನಪ್ಪ ರೆಡ್ಡಿ ವರದಿ, ಮಂಡಲ ವರದಿಯ ಜಾರಿಗೆ ಒತ್ತಾಯಿಸಿ ಹೋರಾಟ ಸಂಘಟಿಸಿದ್ದ ಹಿಂದುಳಿದ ವರ್ಗಗಳ ನಾಯಕ,   ಹಿರಿಯ ಕಾಂಗ್ರೆಸ್ಸಿಗ, ಮಾಜಿ ಮುಖ್ಯಮಂತ್ರಿ ದೇವರಾಜು ಅರಸುರವರ ಆತ್ಮೀಯರಾಗಿದ್ದ ಮುಲ್ಕಿಯ ಹಿರಿಯ ಹೋರಾಟಗಾರ ಮೂಲ್ಕಿ ಜಯಾನಂದ ದೇವಾಡಿಗ (90) ಮಂಗಳವಾರ ನಿಧನರಾದರು.

ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಹಿಂದುಳಿದ ವರ್ಗಗಳಾದ ಬಿಲ್ಲವ, ದೇವಾಡಿಗ, ಕುಲಾಲ,ಗಾಣಿಗ, ಸಫಲಿಗ ಮುಂತಾದ ಪ್ರವರ್ಗ 2ಎ ಮತ್ತು ಮೊಗವೀರ ಮುಂತಾದ ಪ್ರವರ್ಗ 1ಎ ಗೆ ಸೇರಿರುವ ಶೋಷಿತ ಅವಕಾಶ ವಂಚಿತ ಎಲ್ಲಾ ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿಕೊಂಡು ಸಮಸ್ತ ಹಿಂದುಳಿದ ವರ್ಗಗಳ ಪರವಾಗಿ ಹಲವಾರು ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾಗಿದ್ದ ಜಯಾನಂದ‌ ದೇವಾಡಿಗ, ಆದರ್ಶ ಗಾಂಧಿವಾದಿಯಾಗಿದ್ದವರು.

ಜಯಾನಂದ‌ ದೇವಾಡಿಗ ನಿಧನಕ್ಕೆ ಸಂತಾಪ ಸೂಚಿಸಿರುವ ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಮುಖಂಡ ಅವರು, ಜಯಾನಂದ ದೇವಾಡಿಗ ಅದ್ವಿತೀಯ ಸಂಘಟಕರಾಗಿ, ಕರಾವಳಿ ಭಾಗದಲ್ಲಿ ದೇವಾಡಿಗ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.  ಮೂಲ್ಕಿ ಜಯಾನಂದ ದೇವಾಡಿಗರವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ.  ಜಯಾನಂದ ದೇವಾಡಿಗ ಅವರು ಡಿ. ದೇವರಾಜ ಅರಸು ಅವರ ಚಿಂತನೆ, ಆದರ್ಶ ತತ್ವಗಳಿಗೆ ಧ್ವನಿಯಾಗಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ, ನಿರಂತರವಾಗಿ ಹೋರಾಟ ಮಾಡಿದವರು. ದೇವರಾಜ ಅರಸು ಅವರು ಕಾರ್ಯಗತಗೊಳಿಸಿದ ಯೋಜನೆ, ಕಾರ್ಯಕ್ರಮಗಳನ್ನು ಹಿಂದುಳಿದ ವರ್ಗಗಳ ಸಮುದಾಯಕ್ಕೆ ತಲುಪಿಸಲು ನಿರಂತರವಾಗಿ ಶ್ರಮಿಸಿದವರು. ಹಿಂದುಳಿದ ವರ್ಗಗಳ ಶಿಕ್ಷಣ, ಆರ್ಥಿಕ ಅಭಿವೃದ್ಧಿಗಾಗಿ, ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು ಎಂದಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!