ಸಮುದ್ರದಲ್ಲಿ ತೇಲಿ ಬಂತು ದೇವಸ್ಥಾನದ ಶಿಖರ ಕಲಶ

ಕುಂದಾಪುರ: ಯಾವುದೋ ದೇವಸ್ಥಾನವೊಂದರದ್ದು ಎನ್ನಲಾದ ತಾಮ್ರದ ಕಲಶವೊಂದು ಸಮುದ್ರದಲ್ಲಿ ತೇಲಿ ಬಂದು ಸಾರ್ವಜನಿಕರಲ್ಲಿ ಕೂತೂಹಲ ಮೂಡಿಸಿದ ಘಟನೆ ಬೈಂದೂರು ತಾಲ್ಲೂಕಿನ ಪಡುವರಿ ಗ್ರಾಮದ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ.
ದೇವಸ್ಥಾನದ ಗೋಪುರಕ್ಕೆ ಅಳವಡಿಸಿದ್ಧ ಕಲಶವೆಂದು ಅಂದಾಜಿಸಲಾಗಿದ್ದು, ಸುಮಾರು ಮೂರು ಕೆ.ಜಿ. ತೂಕವಿದೆ ಎನ್ನಲಾಗಿದೆ. ಮಾಹಿತಿ ತಿಳಿದ ಗಂಗೊಳ್ಳಿ ಕರಾವಳಿ ಭದ್ರತಾ ಪೊಲೀಸ್ ಇನ್ಸ್‌ಪೆಕ್ಟರ್ ವಸಂತರಾಮ ಆಚಾರ್, ಸಬ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಎಚ್ ಮತ್ತು ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕಲಶ ವಶಕ್ಕೆ ತೆಗೆದುಕೊಂಡರು. ಕಲಶದ ವಾಸುದಾರರು ಇದ್ದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
