ಭರತನಾಟ್ಯ ಪ್ರಾವೇಶಿಕ ಪೂರ್ಣ ವಿಭಾಗದಲ್ಲಿ ಪ್ರಾಪ್ತಿ ಮಡಪ್ಪಾಡಿ ಪ್ರಥಮ

ಕುಂದಾಪುರ: ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ ಮುಂಬೈ ಇದರ 2024-25ರ ಸಾಲಿನ ಭರತನಾಟ್ಯ ಪ್ರಾವೇಶಿಕ ಪೂರ್ಣ ಪರೀಕ್ಷೆಯಲ್ಲಿ ಕುಂದಾಪುರದ ಸಾಧನ ಕಲಾ ಸಂಗಮದ ಭರತನಾಟ್ಯ ವಿದ್ಯಾರ್ಥಿನಿ ಹಾಗೂ ಕುಂದಾಪುರದ ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರಾಪ್ತಿ ಮಡಪ್ಪಾಡಿ 125ರಲ್ಲಿ 119 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಹೊನ್ನಾವರದ ಸೆಂಟರ್ ನಲ್ಲಿ ಪರೀಕ್ಷೆ ಬರೆದಿದ್ದ ಪ್ರಾಪ್ತಿ ಮಡಪ್ಪಾಡಿ, ಪರೀಕ್ಷಾ ಕೇಂದ್ರದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಕುಂದಾಪುರದ ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಹಾಗೂ ಮಧುಸ್ಮಿತಾ ಜಯಶೇಖರ್ ಅವರ ಹಿರಿಯ ಪುತ್ರಿಯಾಗಿದ್ದು, ಉಡುಪಿಯ ಭರತನಾಟ್ಯ ಗುರು, ವಿದುಷಿ. ಲಕ್ಷ್ಮೀ ಗುರುರಾಜ್ ಅವರ ಶಿಷ್ಯೆ ವಿದುಷಿ ಅರ್ಪಿತಾ ಹೆಗಡೆ ಅವರ ಶಿಷ್ಯೆ.
ಪ್ರಾಪ್ತಿ ಮಡಪ್ಪಾಡಿ ಅವರ ಸಾಧನೆಗೆ ಸಾಧನಾ ಕಲಾ ಸಂಗಮದ ವಿಶ್ವಸ್ಥ ನಾರಾಯಣ ಐತಾಳ್ ಹಾಗೂ ಆಡಳಿತ ಮಂಡಳಿ, ಭರತನಾಟ್ಯ ಗುರು ವಿದುಷಿ ಅರ್ಪಿತಾ ಹೆಗಡೆ ಹಾಗೂ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಇದರ ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಅಭಿನಂದಿಸಿದ್ದಾರೆ.
