BlogEconomyEntertainmentFashionGovernmentHighlightsHuman storiesLocal newsOthersPoliticsTop StoriesTrending

ಕೆ‌ಎಸ್‌ಆರ್‌ಟಿಸಿಗೆ 8೦೦ ಹೊಸ ಬಸ್ – ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Aware others:

ಕುಂದಾಪುರ : ಕೆ.ಎಸ್.ಆರ್.ಟಿ.ಸಿಗೆ ರಾಜ್ಯದಲ್ಲಿ ಒಟ್ಟು 800 ಹೊಸ ಬಸ್ ಗ:ನ್ನು ನೀಡಲು ಸಿದ್ಧತೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾ,ಮಲಿಂಗರೆಡ್ಡಿ ಹೇಳಿದ್ದಾರೆ.

ಕೋಟೇಶ್ವರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪುತ್ತೂರು, ಮಂಗಳೂರು, ಚಾಮರಾಜನಗರ ಹಾಗೂ ರಾಮನಗರ ವಿಭಾಗದಲ್ಲಿ ಚಾಲಕರ ಕೊರತೆ ಇತ್ತು. ಈಗ ರಾಜ್ಯದಲ್ಲಿ ಎರಡು ಸಾವಿರ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಮಂಗಳೂರು ವಿಭಾಗಕ್ಕೆ ಸುಮಾರು 340 ಚಾಲಕರನ್ನು ನೀಡಲಾಗಿದೆ. ಉಡುಪಿಗೆ 200ಕ್ಕೂ ಮಿಕ್ಕಿ ಚಾಲಕರನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಆಗುದಿಲ್ಲ ಎಂದು ಅವರು ಹೇಳಿದರು. ನರ್ಮ್ ಬಸ್ ಬೇಡಿಕೆ ಬಗ್ಗೆ ಮಾತನಾಡಿದ ಅವರು ಯುಪಿಎ ಸರಕಾರದ ಅವಧಿಯಲ್ಲಿ ನಗರ ಪ್ರದೇಶಗಳಿಗೆ ನರ್ಮ್ ಯೋಜನೆಯಡಿ ಬಸ್ ನೀಡುತ್ತಿದ್ದರು. ಸರಕಾರ ಬದಲಾದ ಮೇಲೆ ಯೋಜನೆ ಬದಲಾಗಿದೆ ಎಂದರು.

ಪಕ್ಷ ಅಧಿಕಾರಕ್ಕೆ ಬಂದಿದೆ. ಜನರು ಆಶೀರ್ವಾದ ಮಾಡಿದ್ದಾರೆ. ಗೆದ್ದವರು ಅದನ್ನು ತಿಳಿದುಕೊಳ್ಳಬೇಕು. ಎಲ್ಲರಿಗೂ ಮಂತ್ರಿ ಸ್ಥಾನ ಸಿಕ್ಕಿರಲ್ಲ, ಎಲ್ಲರೂ ಚೇರ್‍ಮೆನ್ ಆಗಿರಲ್ಲ. ಸ್ವಲ್ಪ ಸಮಾಧಾನವಾಗಿರಬೇಕು. ಸಮಾಧಾನವಾಗಿ ಇರದಿದ್ದರೆ ಅಪಾಯ. 135 ಜನ ಶಾಸಕರ ಪೈಕಿ ಇಬ್ಬರು ಮೂರು ಜನ ಶಾಸಕರು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಿಲ್ಲ ಎಂದು ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.


Aware others:

Leave a Reply

Your email address will not be published. Required fields are marked *

error: Content is protected !!